ಮೈಸೂರು: ಗುಂಡಿನ ದಾಳಿ ನಡೆಸಿ 4 ರಿಂದ 5 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣ ದರೋಡೆ..!!

ಮೈಸೂರು: ಗುಂಡಿನ ದಾಳಿ ನಡೆಸಿ 4 ರಿಂದ 5 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣ ದರೋಡೆ..!!

MYSURU  ಮೈಸೂರು ದರೋಡೆ  ಸ್ಕೈ ಗೋಲ್ಡ್ ಅಂಡ್ ಡೈಮಂಡ್​ DAYLIGHT ROBBERY

ಮೈಸೂರು: ಹುಣಸೂರು ತಾಲೂಕಿನ ಚಿನ್ನಾಭರಣ ಮಳಿಗೆಗೆ ನುಗ್ಗಿದ ಡಕಾಯಿತರು ಮ್ಯಾನೇಜರ್​ ಮೇಲೆ ಗುಂಡಿನ ದಾಳಿ ನಡೆಸಿ, ಸುಮಾರು 4 ರಿಂದ 5 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಹುಣಸೂರು ಬಸ್ ನಿಲ್ದಾಣದ ಹಿಂದಿರುವ ಸ್ಕೈ ಗೋಲ್ಡ್ ಅಂಡ್ ಡೈಮಂಡ್​ ಶಾಪ್​ಗೆ ಬೈಕ್‌ನಲ್ಲಿ ಬಂದ ಐವರು ಮುಸುಕುಧಾರಿಗಳು ದರೋಡೆ ಮಾಡಿದ್ದಾರೆ. ಚಿನ್ನದ ಮಳಿಗೆಯಲ್ಲಿ ಮ್ಯಾನೇಜರ್ ಅಜ್ಗರ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಮ್ಯಾನೇಜರ್ ಪ್ರಾಣಾಪಾಯಯಿಂದ ಪಾರಾಗಿದ್ದಾರೆ. ಪರಾರಿಯಾಗುವ ವೇಳೆ ಓರ್ವ ದರೋಡೆಕೋರ ಹೆಲ್ಮೆಟ್ ಬಿಟ್ಟು ಹೋಗಿದ್ದಾನೆ.


ವಿಷಯ ತಿಳಿದು ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಹಾಗೂ ಪಟ್ಟಣ ಪೊಲೀಸರು ದೌಡಾಯಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಂಡ ಪರಿಶೀಲನೆ ನಡೆಸುತ್ತಿದೆ. ಮಾಹಿತಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಎಎಸ್‌ಪಿ ಎಲ್. ನಾಗೇಶ್ ಸ್ಥಳಕ್ಕೆ ತೆರಳಿದ್ದಾರೆ. ಹಾಡಹಗಲೇ ನಡೆದ ದರೋಡೆಯಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

Ads on article

Advertise in articles 1

advertising articles 2

Advertise under the article