ಉತ್ತರ ಪ್ರದೇಶ :ನಿದ್ದೆಯಲ್ಲಿ ಮಗ್ಗುಲು ಬದಲಿಸಿದ ಅಪ್ಪನಡಿ ಸಿಲುಕಿ 26 ದಿನದ ಶಿಶು ಸಾವು...!!

ಉತ್ತರ ಪ್ರದೇಶ :ನಿದ್ದೆಯಲ್ಲಿ ಮಗ್ಗುಲು ಬದಲಿಸಿದ ಅಪ್ಪನಡಿ ಸಿಲುಕಿ 26 ದಿನದ ಶಿಶು ಸಾವು...!!

ನೊಯ್ಡಾ: ಉತ್ತರ ಪ್ರದೇಶದ ಗಜ್ರೌಲಾ ಪ್ರದೇಶದಲ್ಲಿ ರಾತ್ರಿ ಮಂಚದ ಮೇಲೆ ಮಲಗಿದ್ದ ಪೋಷಕರ ನಡುವೆ ಆಕಸ್ಮಿಕವಾಗಿ ಸಿಲುಕಿ ನವಜಾತ ಶಿಶು ಸಾವನ್ನಪ್ಪಿದೆ.

26 ದಿನದ ಮಗುವನ್ನು ಮಂಚದ ಮೇಲೆ ಮಲಗಿಸಿದ್ದಾಗ ಆ ಮಗುವಿನ ತಂದೆ ನಿದ್ರೆಯ ಮಂಪರಿನಲ್ಲಿ ಮಗುವಿನ ಮೇಲೆ ಮಗ್ಗುಲು ಬದಲಾಯಿಸಿದ್ದಾರೆ. ಇದರಿಂದ ಆ ಮಗು ಅವರ ಕೆಳಗೆ ಸಿಲುಕಿ ಸಾವನ್ನಪ್ಪಿದೆ.

ಸೂಫಿಯಾನ್ ಎಂಬ ಶಿಶು ನವೆಂಬರ್ 10ರಂದು ಜನಿಸಿತ್ತು. ಸದ್ದಾಂ ಅಬ್ಬಾಸಿ (25) ಮತ್ತು ಅವರ ಪತ್ನಿ ಅಸ್ಮಾ ಮೊದಲ ಮಗು ಅದಾಗಿತ್ತು.

ಶನಿವಾರ ರಾತ್ರಿ ದಂಪತಿ ಮಲಗುವ ಮುನ್ನ ಮಗುವನ್ನು ಹಾಸಿಗೆಯ ಮೇಲೆ ತಮ್ಮ ಮಧ್ಯೆ ಮಲಗಿಸಿಕೊಂಡಿದ್ದರು. ರಾತ್ರಿ ಹಾಲು ಕುಡಿಸಲು ತೊಟ್ಟಿಲಿನ ಬಳಿ ಹೋಗಬೇಕಾಗುತ್ತದೆ ಎಂದು ಆ ಮಹಿಳೆ ಮಗುವನ್ನು ಪಕ್ಕದಲ್ಲೇ ಮಲಗಿಸಿಕೊಂಡಿದ್ದರು. ಆ ಮಗುವಿನ ತಂದೆ ರಾತ್ರಿ ತಿಳಿಯದೆ ಮಗ್ಗುಲು ಬದಲಾಯಿಸಿದ್ದರಿಂದ 26 ದಿನಗಳ ಮಗು ಅವರ ದೇಹದ ಕೆಳಗೆ ಸಿಕ್ಕಿಹಾಕಿಕೊಂಡಿತು.

ಭಾನುವಾರ ಬೆಳಗ್ಗೆ ಅಸ್ಮಾ ಮಗುವಿಗೆ ಹಾಲುಣಿಸಲು ಎಚ್ಚರವಾದಾಗ ಮಗು ಪ್ರತಿಕ್ರಿಯಿಸದಿರುವುದನ್ನು ಕಂಡರು. ತಕ್ಷಣ ಮಗುವಿನ ತಂದೆ ಸದ್ದಾಂ ಆ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮಗು ಮೃತಪಟ್ಟಿದೆ ಎಂದು ಘೋಷಿಸಿದರು.

ಮಗು ಹುಟ್ಟಿದಾಗಿನಿಂದ ಬಹಳ ದುರ್ಬಲವಾಗಿತ್ತು. ಆ ಮಗುವಿಗೆ ಉಸಿರಾಟದ ತೊಂದರೆಯಿತ್ತು. ನಂತರ ಕಾಮಾಲೆಯಿಂದ ಬಳಲುತ್ತಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಪೋಷಕರು ಆಸ್ಪತ್ರೆಯಲ್ಲಿ ಆಘಾತದ ಸ್ಥಿತಿಯಲ್ಲಿ ಪರಸ್ಪರ ಕಿರುಚಾಡುತ್ತಾ ಗೋಳಾಡುತ್ತಿದ್ದರು. ನಂತರ ಕುಟುಂಬದ ಸದಸ್ಯರು ಅವರನ್ನು ಸಮಾಧಾನಪಡಿಸಿದರು. ಈ ಸಂಬಂಧ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article