ದಾವಣಗೆರೆ :185 ವಿದ್ಯಾರ್ಥಿನಿಯರಿಗೆ ಒಂದೇ ಟಾಯ್ಲೆಟ್! ನೇಚರ್ ಕಾಲ್‌ಗೂ ಇಲ್ಲಿ ಸಾಲಲ್ಲಿ ನಿಲ್ಲಬೇಕು...!!

ದಾವಣಗೆರೆ :185 ವಿದ್ಯಾರ್ಥಿನಿಯರಿಗೆ ಒಂದೇ ಟಾಯ್ಲೆಟ್! ನೇಚರ್ ಕಾಲ್‌ಗೂ ಇಲ್ಲಿ ಸಾಲಲ್ಲಿ ನಿಲ್ಲಬೇಕು...!!

ದಾವಣಗೆರೆ: ಮಾಯಕೊಂಡ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಉಪಯೋಗ ಆಗಲಿ ಎಂದು ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಂಜೂರು ಮಾಡಿದೆ.‌ ದುರಂತ ಎಂದರೆ ಆ ಶಾಲೆಯಲ್ಲಿರುವ 185 ವಿದ್ಯಾರ್ಥಿನಿಯರಿಗೆ ಏಕೈಕ ಶೌಚಾಲಯವಿದ್ದರೆ, ಗಂಡುಮಕ್ಕಳಿಗೆ ಬಯಲೇ ಗತಿಯಾಗಿದೆ.

ಈ ಶೌಚಾಲಯಕ್ಕೆ ಮಕ್ಕಳು ತೆರಳಬೇಕಾದರೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಯನ್ನು ಇಂದಿಗೂ ಅಲ್ಲಿ ಕಾಣಬಹುದಾಗಿದೆ. ಒಬ್ಬರು ಶೌಚಗೃಹಕ್ಕೆ ತೆರಳಿ ಹೊರಬಂದ ಮೇಲೆ ಮತ್ತೊಬ್ಬರು ತೆರಳುವುದು ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಕಾರಣವಾಗಿದೆ.

ತಕ್ಷಣ ಹೈಟೆಕ್ ಶೌಚಾಲಯ ನಿರ್ಮಿಸಿ ಎಂದು ಪ್ರಾಚಾರ್ಯರ ಗಮನಕ್ಕೆ ತಂದಿದ್ದರೂ, ಶಾಲೆಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿದ್ದರೂ ಯಾವುದೇ ಪ್ರಯೋಜ‌ನ ಆಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಎದುರಾಗಿ ಹಲವು ವರ್ಷಗಳೇ ಉರುಳಿವೆ. ಶಾಲೆಯ 353 ವಿದ್ಯಾರ್ಥಿಗಳ ಪೈಕಿ ಪ್ರೌಢಶಾಲೆಯ 185 ವಿದ್ಯಾರ್ಥಿನಿಯರು ಸರತಿ ಸಾಲಿನಲ್ಲಿ ನಿಂತು ಶೌಚಾಲಯಕ್ಕೆ ತೆರಳುವಂತಾಗಿದೆ. ಉಳಿದ 168 ವಿದ್ಯಾರ್ಥಿಗಳು ಬಯಲಿನಲ್ಲೇ ಶೌಚಾಲಯಕ್ಕೆ ತೆರಳುತ್ತಿದ್ದಾರೆ. ಒಂದು ಪುಟ್ಟ ಶೌಚಗೃಹದಲ್ಲಿ ನಾಲ್ಕು ಯುನಿಟ್ಗಳಿದ್ದು, ಮಕ್ಕಳಿಗೆ ಸಮಸ್ಯೆ ಆಗುತ್ತಿದೆ.

Ads on article

Advertise in articles 1

advertising articles 2

Advertise under the article