ಅರುಣಾಚಲ ಪ್ರದೇಶ: ಉರುಳಿಬಿದ್ದ ಪಿಕಪ್ ವಾಹನ: 14 ಮಂದಿ ಸಾವು, ಓರ್ವನ ಸ್ಥಿತಿ ಗಂಭೀರ..!!

ಅರುಣಾಚಲ ಪ್ರದೇಶ: ಉರುಳಿಬಿದ್ದ ಪಿಕಪ್ ವಾಹನ: 14 ಮಂದಿ ಸಾವು, ಓರ್ವನ ಸ್ಥಿತಿ ಗಂಭೀರ..!!

 ಅರುಣಾಚಲ ಪ್ರದೇಶ: ಪಿಕಪ್ ವಾಹನವೊಂದು ಉರುಳಿಬಿದ್ದ ಪರಿಣಾಮ 14 ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಈ ಘಟನೆ ಅಂಜಾವ್ ಜಿಲ್ಲೆಯ ಹಯುಲಿಯಾಂಗ್ ಮತ್ತು ಸಗಲ್ಗಾಮ್ ರಸ್ತೆಯಲ್ಲಿ ನಡೆದಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

ಹಯುಲಿಯಾಂಗ್‌ನಿಂದ ಸುಮಾರು 47 ಕಿಲೋ ಮೀಟರ್ ದೂರದಲ್ಲಿರುವ ಸಗಲ್ಗಾಮ್ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.

ಕಾರ್ಮಿಕರನ್ನು ಸಾಗಿಸುತ್ತಿದ್ದ ಪಿಕಪ್ ವ್ಯಾನ್ ಪರ್ವತ ರಸ್ತೆಯಲ್ಲಿ ಉರುಳಿಬಿದ್ದ ಪರಿಣಾಮ ಅವಘಡ ನಡೆದಿದೆ. ಇದರಿಂದ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಓರ್ವನ ಸ್ಥಿತಿ ಗಂಭೀರವಾಗಿದೆ.

ಗಾಯಾಳುವನ್ನು ದಿಬ್ರುಗಢ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹಯುಲಿಯಾಂಗ್ ಹೆಚ್ಚುವರಿ ಜಿಲ್ಲಾಧಿಕಾರಿ ಜೂಲಿಟಿ ಮಿಹು ತಿಳಿಸಿದ್ದಾರೆ. ಮೃತ ಕಾರ್ಮಿಕರೆಲ್ಲರೂ ತಿನ್ಸುಕಿ ಮೂಲದವರಾಗಿದ್ದಾರೆ.
ಸೋಮವಾರ ರಾತ್ರಿಯೇ ಈ ಘಟನೆ ನಡೆದಿದ್ದು, ದಾರಿಹೋಕರು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಬಳಿಕವಷ್ಟೇ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article