ತುಮಕೂರು :ಗೃಹಸಚಿವರ ತವರಲ್ಲಿ ಹರಿದ ರಕ್ತ, ಮಚ್ಚಿನಿಂದ ಹಲ್ಲೆ: ಓರ್ವ ಸಾವು, ಇನ್ನೊಬ್ಬ ಗಂಭೀರ..!!
Friday, November 14, 2025

ತುಮಕೂರು: ನಗರದಲ್ಲಿ ಮತ್ತೆ ಮಚ್ಚು, ಲಾಂಗ್ ಝಳಪಿಸಿದ್ದು ರಕ್ತದ ಕೋಡಿ ಹರಿದಿದೆ.
ಇಬ್ಬರ ಮೇಲೆ ಡೆಡ್ಲಿ ಅಟ್ಯಾಕ್ ನಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ಈ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಭಿ (28) ಅಲಿಯಾಸ್ ಟಿಬೆಟ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮನೋಜ್ (32) ಅಲಿಯಾಸ್ ಪ್ಯಾಚ್ ಎನ್ನುವ ರೌಡಿಶೀಟರ್ ಗಂಭೀರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ
ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ.
ಮೃತಪಟ್ಟಿರುವ ಅಭಿಯ ಹೊಟ್ಟೆಗೆ ಡ್ರಾಗರ್‌ನಿಂದ ಹೊಡೆದು, ಮುಖಕ್ಕೆ ಹತ್ತು ಬಾರಿ ಲಾಂಗ್ ಮತ್ತು ಮಚ್ಚುಗಳಿಂದ ದಾಳಿ ನಡೆಸಲಾಗಿದೆ. ಮನೋಜ್ ಮೇಲೆ ತಲೆಗೆ ಮಚ್ಚು ಬೀಸಲಾಗಿದೆ.
ಅಭಿ ತುಮಕೂರು ಕ್ಯಾತ್ಸಂದ್ರ ಮೂಲದವನು ಮತ್ತು ಜಾಸ್ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತನ ಹುಟ್ಟುಹಬ್ಬಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.