ಕೊಪ್ಪಳ: ಮಹಿಳೆಗೆ ಮದ್ಯ ಕುಡಿಸಿ ನಾಲ್ವರಿಂದ ಸಾಮೂಹಿಕ ಅತ್ಯಾ*ಚಾರ, ಮಹಿಳೆ ಸ್ಥಿತಿ ಚಿಂತಾಜನಕ..!!
Sunday, November 16, 2025

ಕೊಪ್ಪಳ: ಮಹಿಳೆಗೆ ಮದ್ಯ ಸೇವನೆ ಮಾಡಿಸಿ ನಾಲ್ವರು ಸಾಮೂಹಿಕ ಅತ್ಯಾ*ಚಾರ ನಡೆಸಿದ ಆಘಾತಕಾರಿ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿ ನಡೆದಿದೆ.
ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದ್ದು, ಸಂತ್ರಸ್ತ ಮಹಿಳೆಯನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ, ಪರಿಚಯದವರಿಂದ ಹಣ ಪಡೆಯಲು ಹೊಸಪೇಟೆಯಿಂದ ಕುಷ್ಟಗಿ ಪಟ್ಟಣಕ್ಕೆ ಬಂದಿದ್ದ 39 ವರ್ಷದ ಮಹಿಳೆ. ಭಾನುವಾರ ಸಂಜೆ ವೇಳೆ ನಾಲ್ವರು ಆರೋಪಿಗಳು ಮಹಿಳೆಯನ್ನು ಬೈಕ್ ಮೇಲೆ ಕರೆದೊಯ್ದಿದ್ದಾರೆ.
ಮದ್ಲೂರ ಗ್ರಾಮದ ಬಳಿ ಗುಪ್ತ ಸ್ಥಳಕ್ಕೆ ಕರೆತಂದಿರುವ ಆರೋಪಿಗಳು. ಅಲ್ಲಿಯೇ ಸಂತ್ರಸ್ತೆಗೆ ಮದ್ಯ ಸೇವನೆ ಮಾಡಿಸಿ, ಬಳಿಕ ನಾಲ್ವರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾಳೆ.
ಸಂತ್ರಸ್ತೆಯ ದೂರಿನ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಮುಂದಾಗಿರುವ ಪೊಲೀಸರು. ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.