ಉತ್ತರಕನ್ನಡ: ಹೈಸ್ಕೂಲ್ ವಿದ್ಯಾರ್ಥಿನಿಗೆ ಲೈಂ*ಗಿಕ ದೌರ್ಜನ್ಯ; ಶಿಕ್ಷಕ ಅರೆಸ್ಟ್...!!

ಉತ್ತರಕನ್ನಡ: ಹೈಸ್ಕೂಲ್ ವಿದ್ಯಾರ್ಥಿನಿಗೆ ಲೈಂ*ಗಿಕ ದೌರ್ಜನ್ಯ; ಶಿಕ್ಷಕ ಅರೆಸ್ಟ್...!!

ಉತ್ತರ ಕನ್ನಡ: ಹೈಸ್ಕೂಲ್ ವಿದ್ಯಾರ್ಥಿನಿಯರನ್ನು ಬಲೆಗೆ ಬೀಳಿಸಿಕೊಳ್ಳಲು ಹಲವು ಆಮಿಷವಲ್ಲದೆ ಜೀವ ಬೆದರಿಕೆ ಒಡ್ಡಿ ಪೋಷಕರಿಲ್ಲದ ವೇಳೆ ವಿದ್ಯಾರ್ಥಿನಿಯ ಮನೆಗೆ ತೆರಳಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ದೈಹಿಕ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಘಟನೆ ನಡದಿದೆ. ಈ ವಿಚಾರ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಜೀವ ಬೆದರಿಕ ಹಾಕಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಮುಂಡಗೋಡದ ಪ್ರತಿಷ್ಠಿತ ಖಾಸಗಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಕಿರಣ ಟೋಪೋಜಿ ಬಂಧಿತ ಆರೋಪಿ. ಈತನ ವಿರುದ್ದ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಘಟನೆ ಸಂಬಂಧಿಸಿ ಅಪ್ರಾಪ್ತೆ ಕುಟುಂಬಸ್ಥರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ಕಿರಣ ಟೋಪೋಜಿಯನ್ನು ಅರೆಸ್ಟ್ ಮಾಡಿದ್ದಾರೆ. ಫೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೈಹಿಕ ಶಿಕ್ಷಕ ಕಿರಣ ಟೋಪೊಜಿ ಪಟ್ಟಣದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಅಪ್ರಾಪ್ತ ವಿದ್ಯಾರ್ಥಿನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತೆರಳಿ ಆಗಾಗ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಸ್ಥಳೀಯರು ಈ ದೈಹಿಕ ಶಿಕ್ಷಕನ ವಿರುದ್ಧ ಹಲವು ದೂರು ದಾಖಲಾಗಿದ್ದವು. ವಿದ್ಯಾರ್ಥಿಗಳು ಭಯದಿಂದ ಶಿಕ್ಷನ ವಿರುದ್ಧ ಮೌನ ವಹಿಸಿದ್ದರು. ಇದೀಗ ಒಂದೊಂದೇ ಪ್ರಕರಣಗಳು ಹೊರಬರುತ್ತಿವೆ.

ಕಳೆದ ವರ್ಷದಿಂದ ಮತ್ತೊಂದು ಪ್ರತಿಷ್ಠಿತ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ದೈಹಿಕ ಶಿಕ್ಷಕ, ಅದೇ ಶಾಲೆಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿಯ ಕೃತ್ಯದಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೂ ಮೊದಲು ಬೇರೊಂದು ಖಾಸಗಿ ಶಾಲೆಯಲ್ಲಿ ಕರ್ತವ್ಯದಲ್ಲಿದ್ದಾಗ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಇತರ ವರ್ತನೆ ಬಗ್ಗೆ ದೂರು ಬಂದಿದ್ದರಿಂದ ಸಂಸ್ಥೆಯವರು ಈತನನ್ನು ಕೆಲಸದಿಂದ ತೆಗೆದು ಹಾಕಿದ್ದರು.

Ads on article

Advertise in articles 1

advertising articles 2

Advertise under the article