ಮಂಗಳೂರು :ಹೆತ್ತ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಕ್ರೂರಿ ಮಗಳು..!!

ಮಂಗಳೂರು :ಹೆತ್ತ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಕ್ರೂರಿ ಮಗಳು..!!

ಮಂಗಳೂರು: ಹೆತ್ತ ತಾಯಿಗೆ ಮಗಳು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಂಗಳೂರಿನ ಪಂಚಾಯತ್​ ಕಚೇರಿ ಬಳಿ ನಡೆದಿದೆ. ಮಗಳ ಮೇಲೆ ದೂರು  ಕೊಡಲು ಬಂದ ತಾಯಿಯನ್ನ ತಡೆದ ಈಕೆ ವೃದ್ಧೆಯನ್ನ ನೆಲಕ್ಕೆ ತಳ್ಳಿ, ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ಪಂಚಾಯತ್ ಕಚೇರಿ ಹೊರಗೆ ಅಮ್ಮ-ಮಗಳು ಕಿತ್ತಾಡಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಮಗಳು ತಾಯಿಯನ್ನ ನೆಲಕ್ಕೆ ತಳ್ಳಿದಳು. ವೃದ್ಧೆ ಕೆಳಗೆ ಬಿದ್ದು ಒದ್ದಾಡ್ತಿದ್ದ ವೇಳೆ ಚಪ್ಪಲಿಯಿಂದ ತಾಯಿಯ ಮುಖಕ್ಕೆ ಮಗಳು ಹಿಗ್ಗಾಮುಗ್ಗ ಹೊಡೆದಿದ್ದಾರೆ. ಸ್ಥಳೀಯರ ಮೊಬೈಲ್​ನಲ್ಲಿ ವಿಡಿಯೋ ವೈರಲ್ ಆಗಿದೆ.

 

ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಾಯಿಗೆ ಮಗಳೇ ಹಿಗ್ಗಾಮುಗ್ಗ ಥಳಿಸುತ್ತಿರೋ ವಿಡಿಯೋ ವೈರಲ್ ಆಗಿದೆ. ತಾಯಿ-ಮಗಳಿಬ್ಬರು ಉತ್ತರ ಕರ್ನಾಟಕ ಮೂಲದ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

Ads on article

Advertise in articles 1

advertising articles 2

Advertise under the article