ವಿಜಯಪುರ :ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಕೊಲೆ – ಪೊಲೀಸರಿಗೆ ಶರಣಾದ ಯುವತಿ..
Monday, November 17, 2025

ವಿಜಯಪುರ : ಲಿವ್ ಇನ್ ರಿಲೇಶನ್ಸ್ ನಲ್ಲಿದ್ದ ಯುವಕನ ಕಾಟ ಸಹಿಸಲಾರದೇ ಮಹಿಳೆ ಪ್ರಿಯಕರನ ಕೊಲೆ ಮಾಡಿರುವ ಘಟನೆ ನಗರದ ಅಮನ್ ಕಾಲೋನಿಯ ಮನೆಯೊಂದರಲ್ಲಿ ನಡೆದಿದೆ.
ಸಮೀರ್ ಅಲಿಯಾಸ್ ಪಿಕೆ ಇನಾಂದಾರ್(26) ಹತ್ಯೆಗೊಳಗಾದ ಪ್ರಿಯಕರ.
ನಿನ್ನೆ ರಾತ್ರಿ ವೇಳೆಯಲ್ಲಿ ಇಬ್ಬರ ಮದ್ಯೆ ಗಲಾಟೆ ಸಂಭವಿಸಿದ ಕಲಹದಿಂದ ಬೇಸತ್ತ ಇತನಿಗೊಂದು ಗತಿ ಕಾಣಿಸಲೇ ಬೇಕು ಎಂದು ನಿರ್ಧರಿಸಿದ ತಯ್ಯಬಾ, ತನ್ನ ಸಹೋದರನ ಅಸ್ಲಂ ಭಾಗವಾನನನ್ನು ಕರೆಯಿಸಿ ಮದ್ಯದ ಅಮಲಿನಲ್ಲಿ ಹೊರಳಾಡುತ್ತಿದ್ದ ಸಮೀರನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿ ಶಾಶ್ವತವಾಗಿ ಮಲಗಿಸಿದ್ದಾಳೆ. ಕೊಲೆ ಮಾಡಿದ ಬಳಿಕ ಇಂದು ನೇರವಾಗಿ ಗೋಲ್ ಗುಂಬಜ್ ಪೊಲೀಸ್ ಸ್ಟೇಶನ್ ಗೆ ಹಾಜರಾಗಿದ್ದಾಳೆ.
ಸಮೀರ್ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಿಕೆ ನೀಡಿದ್ದಾಳೆ. ಇನ್ನೂ ಘಟನಾ ಸ್ಥಳಕ್ಕೆ ಗೋಲಗುಂಬಜ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.