ದೆಹಲಿ :ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಯುವ ವೈದ್ಯನ ಬಂಧನ, ಅಲ್ ಫಲಾಹ್ ವಿವಿಯಿಂದ ಪದವಿ ಪಡೆದಿದ್ದ ಯುವಕ...!!

ದೆಹಲಿ :ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಯುವ ವೈದ್ಯನ ಬಂಧನ, ಅಲ್ ಫಲಾಹ್ ವಿವಿಯಿಂದ ಪದವಿ ಪಡೆದಿದ್ದ ಯುವಕ...!!

ನವದೆಹಲಿ : ದೆಹಲಿ ಕಾರು ಸ್ಫೋಟ ಪ್ರಕರಣ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪಶ್ಚಿಮ ಬಂಗಾಳದ ಅಲ್ ಫಲಾಹ್ ವಿಶ್ವವಿದ್ಯಾಲಯದ ಯುವ ವೈದ್ಯರೊಬ್ಬರನ್ನು ಬಂಧಿಸಿದ್ದಾರೆ. 

ಫರೀದಾಬಾದ್ ವಿಶ್ವವಿದ್ಯಾಲಯದಿಂದ 2024ರಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದ ಝನಿಶಾರ್ ಆಲಂ ಎಂಬ ವೈದ್ಯರನ್ನು ಎನ್ಐಎ ಬಂಧಿಸಿದೆ. ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ದಲ್ಖೋಲಾ ಪ್ರದೇಶದಲ್ಲಿ ಝನಿಶಾರ್ ನನ್ನು ಬಂಧಿಸಲಾಗಿದೆ. 

ಮದುವೆ ಸಮಾರಂಭಕ್ಕೆಂದು ಆಲಂ ಫರೀದಾಬಾದ್ ನಿಂದ ನವೆಂಬರ್ 12 ರಂದು ತನ್ನ ಹುಟ್ಟೂರು ಪಶ್ಚಿಮ ಬಂಗಾಳದ ಕೋನಾಲ್ ಗ್ರಾಮಕ್ಕೆ ಬಂದಿದ್ದ ಝನಿಶಾರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಝನಿಶಾರ್ ಮತ್ತು ಅವರ ತಂದೆ ತೌಹಿದ್ ಆಲಂ ಲೂಧಿಯಾನದಲ್ಲಿ ವಾಸಿಸುತ್ತಿದ್ದಾರೆ. ಖಚಿತ ಮಾಹಿತಿ ಮೇರೆಗೆ ಲುಧಿಯಾನದಲ್ಲಿರುವ ತೌಹಿದ್ ಅವರನ್ನು ಸಂಪರ್ಕಿಸಿದ್ದ ಅಧಿಕಾರಿಗಳು ಮಗನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ನಂತರ ಪಶ್ಚಿಮ ಬಂಗಾಳದಲ್ಲಿರುವ ಸ್ಥಳದ ಬಗ್ಗೆ ತಿಳಿದುಕೊಂಡು ದಾಳಿ ನಡೆಸಿದ್ದರು. 

ದೆಹಲಿ ಸ್ಫೋಟ ಸಂಬಂಧಿಸಿ ಈಗಾಗಲೇ ಅಲ್ ಫಲಾಹ್ ವಿಶ್ವವಿದ್ಯಾಲಯದ ನಾಲ್ವರು ವೈದ್ಯರನ್ನು ಎನ್ಐಎ ಬಂಧಿಸಿದೆ. ಇದರ ಬೆನ್ನಲ್ಲೇ ಭಯೋತ್ಪಾದಕ ಪ್ರಕರಣದಲ್ಲಿ ಬಂಧಿತರಾಗಿರುವ ವೈದ್ಯರ ಲೈಸನ್ಸ್ ಅನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ರದ್ದುಪಡಿಸಿದೆ.

Ads on article

Advertise in articles 1

advertising articles 2

Advertise under the article