ಚಾಮರಾಜನಗರ :ಮದುವೆಯಾಗಲೂ ಹೆಣ್ಣು ಕೊಡಲ್ಲ,ಯಾವುದೇ ಶುಭ ಸಮಾರಂಭಗಳಿಗೂ ಆಹ್ವಾನವಿಲ್ಲ!; ಈ ಹಳ್ಳಿಯಲ್ಲಿ 80 ಕುಟುಂಬಕ್ಕೆ ಬಹಿಷ್ಕಾರ..!!

ಚಾಮರಾಜನಗರ :140 ಕುಟುಂಬ ವಾಸ ಮಾಡುವ ಒಂದೇ ಗ್ರಾಮದಲ್ಲಿ 80 ಕುಟುಂಬವನ್ನು ಕುಲದಿಂದ ಹೊರಹಾಕಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ:
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದ ಶಿವರಾಜು ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಘಟನೆ ಸಂಬಂಧ 17 ಮಂದಿ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ಶಿವರಾಜು ಕುಟುಂಬಸ್ಥರ ಪರವಾಗಿ ಸುಮಾರು 80 ಕುಟುಂಬಗಳು ನಿಂತಿದ್ದವು. ಕೇಸ್ ವಾಪಾಸ್ ಪಡೆದುಕೊಂಡು ರಾಜಿ ಪಂಚಾಯತಿ ಮಾಡಲೂ ಕಟ್ಟೆಮನೆಯವರು ಮುಂದಾಗಿದ್ದರು. ಆದ್ರೆ ಮೊದಲು ಆತ್ಮಹತ್ಯೆ ಕೇಸ್ ವಾಪಾಸ್ ಪಡೆಯಿರಿ ನಂತರ ಕುಲದಿಂದ ಬಹಿಷ್ಕಾರ ಹಿಂಪಡೆಯುತ್ತೇವೆ ಎಂಬ ಮಾತನ್ನು ಕಟ್ಟೆಮನೆಯವರು ಹೇಳಿದ್ರಂತೆ, ಆ ಹಿನ್ನಲೆ ಕೇಸ್ ವಾಪಾಸ್ ತೆಗೆಯಲು ಮೃತ ಶಿವರಾಜು ಕುಟುಂಬಸ್ಥರು ಹಿಂದೇಟು ಹಾಕಿದ್ದಾರೆ. ಅಲ್ಲದೇ ಸಮಾಜದ ಯಾವುದೇ ಕೆಲವು, ಹಬ್ಬ,ಸಮಾರಂಭ ಎಲ್ಲಿಯೂ ಕೂಡ ಕರೆಯುತ್ತಿಲ್ಲ. ಈ ಸಾಮಾಜಿಕ ಬಹಿಷ್ಕಾರಕ್ಕೆ ಬ್ರೇಕ್ ಹಾಕುವಂತೆ ಮನವಿ ಮಾಡ್ತಿದ್ದಾರೆ.
ಇನ್ನೂ ಶಿವಣ್ಣ ನಾಯ್ಕ ಎಂಬಾತ ವ್ಯಕ್ತಿಯೊಬ್ಬರಿಗೆ ಚಪ್ಪಲಿಯಲ್ಲಿ ಥಳಿಸಿದ್ದರು ಅನ್ನೋ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದ ಶಿವಣ್ಣನಾಯ್ಕ್ನನ್ನ ಶಿವರಾಜು ಮನವೊಲಿಸಿ ಸಮಾಧಾನ ಪಡಿಸಿದ್ದಕ್ಕೆ ಪ್ರಕರಣದಲ್ಲಿ ನೀನು ಶಾಮೀಲಾಗಿದ್ದೀಯಾ ಎಂದು ಶಿವರಾಜುಗೂ ಸಾಮಾಜಿಕ ಬಹಿಷ್ಕಾರ ಹಾಕಿ 6 ಸಾವಿರ ರೂ ದಂಡ ವಿಧಿಸಿದ್ದರು. ಹೀಗಾಗಿ ಶಿವರಾಜು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರಂತೆ. ಅಲ್ಲದೇ ನಮ್ಮ ಮನೆಗೆ ನಮ್ಮ ಸಂಬಂಧಿಕರಾಗಿದ್ದ ಮೃತ ಶಿವರಾಜು ಅವರ ಅಣ್ಣ ಮಹೇಶ್ ಹಾಗೂ ಇತರರನ್ನು ಊಟಕ್ಕೆ ಆಹ್ವಾನಿಸಿದ್ದೆ, ಅವರು ಬಂದು ಊಟ ಮಾಡಿ ಹೋಗಿದ್ದಕ್ಕೆ ನನಗೂ ಕೂಡ 250 ರೂ ದಂಡ ವಿಧಿಸಿದ್ದರು. ಸದ್ಯ ನಮ್ಮನ್ನು ಕೂಡ ಕುಲದಿಂದ ಹೊರಗಿಟ್ಟಿದ್ದಾರೆಂದು ಮೃತ ಶಿವರಾಜು ಸಂಬಂಧಿಕ ನಾಗ ನಾಯಕ ಕಣ್ಣೀರು ಹಾಕ್ತಿದ್ದಾರೆ .
ಸಾಮಾಜಿಕ ಬಹಿಷ್ಕಾರ ಎಂಬ ಭೂತಕ್ಕೆ ಎರಡು ವರ್ಷದ ಹಿಂದೆಯೇ ಶಿವರಾಜು ಎಂಬ ವ್ಯಕ್ತಿ ಬಲಿಯಾಗಿದ್ದಾನೆ. ಆದ್ರೆ ಇನ್ನೂ ಕೂಡ ಅವರ ಕುಟುಂಬ ಹಾಗೂ ಅವರನ್ನು ಬೆಂಬಲಿಸಿದ 80 ಕುಟುಂಬಗಳು ಕುಲದಿಂದ ಹೊರಗಿದ್ದು, ನಮಗೆ ನ್ಯಾಯ ಕೊಡಿಸಿ ಅಂತಾ ಗೃಹ ಹಾಗೂ ಕಾನೂನು ಸಚಿವರ ಮೊರೆಯಿಟ್ಟಿದ್ದಾರೆ.