ಬೆಂಗಳೂರು :ಬಾಲಕಿಯ ಹೊಟ್ಟೆಯಲ್ಲಿತ್ತು ಬರೋಬ್ಬರಿ 3 ಕೆ.ಜಿ ಕೂದಲು: ವೈದ್ಯರೇ ಶಾಕ್.!!

ಬೆಂಗಳೂರು :ಬಾಲಕಿಯ ಹೊಟ್ಟೆಯಲ್ಲಿತ್ತು ಬರೋಬ್ಬರಿ 3 ಕೆ.ಜಿ ಕೂದಲು: ವೈದ್ಯರೇ ಶಾಕ್.!!

ಬೆಂಗಳೂರು: 8 ವರ್ಷದ ಬಾಲಕಿ ಹೊಟ್ಟೆಯಲ್ಲಿ ಬರೋಬ್ಬರಿ 3 ಕೆ.ಜಿ. ತೂಕದಷ್ಟು ಕೂದಲು ಪತ್ತೆಯಾಗಿದ್ದು, ವೈದ್ಯರೇ ಅಚ್ಚರಿಗೆ ಒಳಗಾಗಿದ್ದಾರೆ.ಬಹು ಅಪರೂಪದ ‘ಟ್ರೈಕೊ ಬೆಜೋರ್’ ಎಂಬ ಕೂದಲು ನುಂಗುವ ರೋಗದಿಂದ ಬಳಲುತ್ತಿದ್ದ ಬಾಲಕಿ ಸುಮಾರು 4-5 ವರ್ಷಗಳಿಂದ ಕೂದಲು ನುಂಗಿರುವ ಸಾಧ್ಯತೆಯಿದೆ.

ಇತ್ತೀಚೆಗೆ ತೂಕ ಕಡಿಮೆಯಾಗುತ್ತಿತ್ತು. ತೀವ್ರ ಹೊಟ್ಟೆ ನೋವು, ವಾಂತಿ ಹಾಗೂ ಹೊಟ್ಟೆ ಭಾಗದಲ್ಲಿ ಗಡ್ಡೆ ರೀತಿಯ ಗುರುತು ಪತ್ತೆಯಾಗಿದ್ದರಿಂದ ಎಚ್ಚೆತ್ತ ಪೋಷಕರು ನೇಟಸ್‌ ಆಸ್ಪತ್ರೆಗೆ ಕರೆತಂದಿದ್ದಾರೆ.

ಈ ವೇಳೆ ವೈದ್ಯರು ಪರಿಶೀಲಿಸಿ, ಹೊಟ್ಟೆ ಭಾಗದಲ್ಲಿ ಗಡ್ಡೆ ಇದ್ದಿದ್ದರಿಂದ ಸಿಟಿ-ಸ್ಕ್ಯಾನ್‌ ಮಾಡಿದ್ದರು. ಸ್ಕ್ಯಾನ್‌ ವರದಿಯಲ್ಲಿ ಕೂದಲು ಇರುವುದು ಪತ್ತೆಯಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಿ ಕೂದಲು ತೆಗೆಯಲಾಗಿದೆ.

ಮಕ್ಕಳ ಕ್ರಿಟಿಕಲ್‌ ಕೇರ್‌ ತಜ್ಞರಾದ ಡಾ.ಎಚ್.ಎಸ್‌.ಸುರೇಂದ್ರ ನೇತೃತ್ವದಲ್ಲಿ ಡಾ.ಪ್ರದೀಪ್‌, ಡಾ.ಹೇಮಾ, ಡಾ. ದೀಪ್ತಿ, ಡಾ.ಕೇಶವ ಮೂರ್ತಿ, ಡಾ.ಮಂಜುನಾಥ್ ಅವರನ್ನು ಒಳಗೊಂಡ ವಿವಿಧ ತಜ್ಞ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

Ads on article

Advertise in articles 1

advertising articles 2

Advertise under the article