ರಾಯಚೂರು :ಡಿಜೆ ವಿಚಾರಕ್ಕೆ ಗಲಾಟೆ :ಕ್ಷಣಾರ್ಧದಲ್ಲಿ ರಣರಂಗವಾದ ಮದುವೆ ಮನೆ -ಎರಡು ಕುಟುಂಬದ ನಡುವೆ ಮಾರಾಮಾರಿ1....!!

ರಾಯಚೂರು: ಮದುವೆ ಮೆರವಣಿಗೆಯ ವೇಳೆ ಉಂಟಾದ ಡಿಜೆ ವಿವಾದ ದೊಡ್ಡ ಗಲಭೆಗೆ ತಿರುಗಿ, ಎರಡು ಕುಟುಂಬಗಳ ನಡುವೆ ಮಾರಾಮಾರಿಗೆ ಕಾರಣವಾದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಹಿತಿ ಪ್ರಕಾರ, ರವಿವಾರ ಮಾರೆಪ್ಪಾ ಅನ್ನೋರ ತಂಗಿ ಮದುವೆಯ ಮೆರವಣಿಗೆ ವೇಳೆ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಡಿಜೆ ಸದ್ದು ಅಧಿಕವಾಗಿದೆ ಎಂಬ ಕಾರಣಕ್ಕೆ ಕೆಲವು ಸ್ಥಳೀಯರು ಡಿಜೆ ಬಂದ್ ಮಾಡಿರಿ ಎಂದು ವಾಗ್ವಾದ ಎಬ್ಬಿಸಿದ್ದರು. ಇದನ್ನು ಗಮನಿಸಿದ ಮಾರೆಪ್ಪ ತಕ್ಷಣವೇ ಡಿಜೆ ಸದ್ದನ್ನು ನಿಲ್ಲಿಸಿದರು. ಆದರೂ, ಯಾಕೆ ಡಿಜೆ ಹಾಕಿದ್ದಿರಿ? ಸದ್ದು ಮಾಡಿದ್ದೇಕೆ? ಎಂದು ಕಾವಲಿ ಈರಣ್ಣ ಮತ್ತು ಅವರ ಕುಟುಂಬಸ್ಥರು ಮಾರೆಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಸೇರಿ ಎರಡು ಕುಟುಂಬಗಳ ಮಧ್ಯೆ ವಾಗ್ವಾದ ಹೆಚ್ಚಿತು.
ಈ ವೈಮನಸ್ಯದ ಮುಂದುವರಿಕೆಯಾಗಿ, ಸೋಮವಾರ ರಾತ್ರಿ ಮಾರೆಪ್ಪ ಅವರ ಮನೆಗೆ ನುಗ್ಗಿ, ಕಾವಲಿ ಈರಣ್ಣ ಹಾಗೂ ಅವರ ಕುಟುಂಬ ಸದಸ್ಯರು ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದಾಳಿಯಲ್ಲಿ ಕಟ್ಟಿಗೆ, ಬೆತ್ತ, ಕಾರದ ಪುಡಿ, ಕಲ್ಲು ಹಾಗೂ ಕಬ್ಬಿಣದ ರಾಡುಗಳನ್ನು ಬಳಸಲಾಗಿದೆ ಎಂದು ತಿಳಿದು ಬಂದಿದೆ.