ಪುತ್ತೂರು :ಕೃಷ್ಣ ರಾವ್ ಪ್ರಕರಣದಲ್ಲಿ ಜಿಲ್ಲೆಯ ನೀಚ ರಾಜಕಾರಣಿಗಳು ತುಟಿ ಬಿಚ್ಚುತ್ತಿಲ್ಲ…ನಮ್ಮ ಜಿಲ್ಲೆಯಲ್ಲಿ ಯಾರು ಗಂಡಸರು ಇಲ್ಲವಾ??? ಪ್ರತಿಭಾ ಕುಳಾಯಿ.

ಪುತ್ತೂರು :ಕೃಷ್ಣ ರಾವ್ ಪ್ರಕರಣದಲ್ಲಿ ಜಿಲ್ಲೆಯ ನೀಚ ರಾಜಕಾರಣಿಗಳು ತುಟಿ ಬಿಚ್ಚುತ್ತಿಲ್ಲ…ನಮ್ಮ ಜಿಲ್ಲೆಯಲ್ಲಿ ಯಾರು ಗಂಡಸರು ಇಲ್ಲವಾ??? ಪ್ರತಿಭಾ ಕುಳಾಯಿ.

ಮಂಗಳೂರು : ಕೃಷ್ಣ ರಾವ್ ಪ್ರಕರಣದಲ್ಲಿ ಜಿಲ್ಲೆಯ ಯಾವುದೇ ಹಿಂದೂ ಸಂಘಟನೆಗಳು ಮಾತನಾಡುತ್ತಿಲ್ಲಇದು ಹಿಂದೂ ಮುಸ್ಲಿಂ ಸಮಸ್ಯೆ ಆಗಿದ್ದರೆ, ಅದರ ಚಿತ್ರಣವೇ ಬದಲಾಗುತ್ತಿದ್ದು, ಎಷ್ಟೋ ಜನರ ಪ್ರಾಣ ಹೊಗುತ್ತಿತ್ತು, ಆದರೆ ಜಿಲ್ಲೆಯ ನೀಚ ರಾಜಕಾರಣಿಗಳು ಇವತ್ತು ತುಟಿ ಬಿಚ್ಚುತ್ತಿಲ್ಲ ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡು ಮಗು ನೀಡಿ ಇದೀಗ ಆರೋಪಿ ಕೃಷ್ಣ ರಾವ್ ಇದೀಗ ಮದುವೆಗೆ ಒಪ್ಪುತ್ತಿಲ್ಲ, ಆರೋಪಿ ಬೇಕಾದ ಕಡೆ ಮಕ್ಕಳನ್ನು ಮಾಡ್ತಾ ಇದ್ದಾನೆ…ಅಪ್ಪ ಆಶ್ರಮ ಓಪನ್ ಮಾಡೋದು ಒಳ್ಳೆಯದು ಎಂದರು.ನಮ್ಮ ಜಿಲ್ಲೆಯಲ್ಲಿ ಹಿಂದುತ್ವ ಬಿಟ್ಟರೆ ಬೇರೆ ಯಾವುದೇ ಸಬ್ಜೆಕ್ಟ್ ಇಲ್ಲ, ಆದರೆ ಸಂತ್ರಸ್ಥೆಯ ಸಮಾಜ ಹಿಂದುಳಿದ ಸಮಾಜಕ್ಕೆ ಸೇರಿದ್ದು, ಅವರ ಸಮುದಾಯದಲ್ಲಿ ಒಗ್ಗಟ್ಟಿಲ್ಲ. ಇವತ್ತು ಈಕೆ ನಾಳೆ ಇನ್ನೊಬ್ಬ ಯುವತಿಗೆ ಇದೇ ಸಮಸ್ಯೆ ಆಗುತ್ತೆ. ಇದು ಹಿಂದೂ ಮುಸ್ಲಿಂ ಸಮಸ್ಯೆ ಆಗಿದ್ದರೆ, ಅದರ ಚಿತ್ರಣವೇ ಬದಲಾಗುತ್ತಿದ್ದು, ಜಿಲ್ಲೆಯಲ್ಲಿ ಎಷ್ಟೋ ಜನರ ಪ್ರಾಣ ಹೊಗುತ್ತಿತ್ತು, ಆದರೆ ಜಿಲ್ಲೆಯ ನೀಚ ರಾಜಕಾರಣಿಗಳು ಇವತ್ತು ತುಟಿ ಬಿಚ್ಚುತ್ತಿಲ್ಲ ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಿಂದ ನಂಜುಡಿಯವರು ಬಂದು ಈ ಪ್ರಕರಣದಲ್ಲಿ ಹೋರಾಟ ಮಾಡುತ್ತಿದ್ದಾರೆ. ಯಾಕೆ ನಮ್ಮ ಜಿಲ್ಲೆಯಲ್ಲಿ ಯಾರು ಗಂಡಸರು ಇಲ್ಲವಾ, ಹಿಂದೂ ಹೆಣ್ಣುಮಗಳು ಅಂದರೆ ಅಷ್ಟು ಕೀಳಾ, ಡಿಎನ್ಎ ಟೆಸ್ಟ್ ಆಗಿ ಇಷ್ಟು ದಿನವಾದರೂ ಅವನಿಗೆ ಮದುವೆಗೆ ಒಪ್ಪಿಸಲಿಕ್ಕೆ ಇವರಿಗೆ ಆಗಿಲ್ಲ, ಅವರ ಸಮಾಜದಲ್ಲಿ ಯಾರೂ ಗಂಡಸರು ಇಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೀಗ ಡಿಎನ್ ಎ ಪರೀಕ್ಷೆಯಲ್ಲಿ ರುಜುವಾತುಗೊಂಡ ಹಿನ್ನೆಲೆಯಲ್ಲಿ ಆತ ಮಗುವಿನ ತಾಯಿಯನ್ನು ಇನ್ನಾದರೂ ವಿವಾಹ ಆಗಲೇಬೇಕು. ತಪ್ಪಿದಲ್ಲಿ ಆತನ ಮನೆಯಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನ್ಯಾಯಕ್ಕಾಗಿ ಧರಣಿ ನಡೆಸುವುದಾಗಿ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಎಚ್ಚರಿಸಿದ್ದಾರೆ.

ಪ್ರೀತಿ, ಪ್ರೇಮದ ಹೆಸರಲ್ಲಿ ಲೈಂಗಿಕ ಚಟುವಟಿಕೆ ನಡೆಸಿ, ಬಳಿಕ ಅರ್ಧದಲ್ಲೇ ಕೈಬಿಡುವ ಘಟನೆಗಳು ಮರುಕಳಿಸಬಾರದು. ಇದೊಂದು ಜಿಲ್ಲೆಗೆ ಕಪ್ಪು ಚುಕ್ಕೆ. ಹಾಗಾಗಿ ಈ ಘಟನೆ ಪ್ರೀತಿಸಿ, ಮಗು ಕರುಣಿಸಿ ಯುವತಿಯ ಬಾಳನ್ನು ಅರ್ಧಕ್ಕೇ ಕೈಬಿಡುವವರಿಗೆ ಒಂದು ಪಾಠವಾಗಬೇಕು ಎಂದರು. ಜಿಲ್ಲೆಯಲ್ಲಿ ದನಕ್ಕೆ ಕೊಡುವ ಮರ್ಯಾದೆ ಒಂದು ಹೆಣ್ಣು ಮಗಳಿಗೆ ಇಲ್ಲ ಎಂದು ಕೋಪ ವ್ಯಕ್ತಪಡಿಸಿದರು.






Ads on article

Advertise in articles 1

advertising articles 2

Advertise under the article