ರಾಷ್ಟ್ರೀಯ ಸುದ್ದಿ :ಬೆಳಗ್ಗೆ 1 ಕಪ್ ಈ ಗಂಜಿ ಕುಡಿಯಿರಿ.. ತೂಕ 2 ಪಟ್ಟು ವೇಗವಾಗಿ ಕಡಿಮೆ ಆಗುತ್ತೆ! ಆರೋಗ್ಯ ಡಬಲ್..!!!
ಹೌದು, ಸಿರಿಧಾನ್ಯಗಳು, ಕಪ್ಪು ಕವುನಿ ಅಕ್ಕಿ, ಮಾಪಿಳ್ಳೈ ಸಾಂಬಾ ಅಕ್ಕಿ, ಬಿದಿರು ಅಕ್ಕಿ ಮುಂತಾದವುಗಳಿಂದ ತಯಾರಿಸಿದ ಗಂಜಿ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ, ಕಪ್ಪು ಕವುನಿ ಅಕ್ಕಿ ಮತ್ತು ಹುರುಳಿಯನ್ನು ಸೇರಿಸಿ ತಯಾರಿಸಿದ ಗಂಜಿಯನ್ನು ಪ್ರತಿದಿನ ಸೇವಿಸುವುದರಿಂದ ತೂಕ ಇಳಿಕೆಯು ಎರಡು ಪಟ್ಟು ವೇಗವಾಗಿ ಆಗುತ್ತದೆ. ಈ ಗಂಜಿಯನ್ನು (Porridge) ಮಕ್ಕಳು ಮತ್ತು ವಯಸ್ಕರು ಎಲ್ಲರೂ ಸೇವಿಸಬಹುದು. ಕಪ್ಪು ಕವುನಿ ಹುರುಳಿ ಗಂಜಿಯನ್ನು (Karuppu Kavuni Kollu Ganji) ತಯಾರಿಸುವುದು ಹೇಗೆ ಎಂಬುದು ಈ ಲೇಖನದಲ್ಲಿ ತಿಳಿಸಲಾಗಿದೆ. ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ. ಇದರ ರುಚಿಯನ್ನು ಸವಿದ ನಂತರ ನಿಮ್ಮ ಸ್ನೇಹಿತರಿಗೂ ಅಥವಾ ಕುಟುಂಬದವರ ಜೊತೆಗೂ ಹಂಚಿಕೊಳ್ಳಿ.
ಕವುನಿ ಹುರುಳಿ ಗಂಜಿಗೆ ಬೇಕಾಗುವ ಸಾಮಗ್ರಿಗಳು :
ಗಂಜಿ ಪುಡಿಗೆ:- • ಕಪ್ಪು ಕವುನಿ ಅಕ್ಕಿ - 1 ಕಪ್ • ಹುರುಳಿ - 1 ಕಪ್ • ಜೀರಿಗೆ - 2 ಸ್ಪೂನ್ • ಕರಿಮೆಣಸು - 1/2 ಸ್ಪೂನ್ ಗಂಜಿ ತಯಾರಿಸಲು • ಗಂಜಿ ಪುಡಿ - 3 ಚಮಚ • ನೀರು - 1/2 ಲೀಟರ್ • ಉಪ್ಪು - ರುಚಿಗೆ ತಕ್ಕಷ್ಟು • ಮಜ್ಜಿಗೆ - ಬೇಕಿದ್ದರೆ (ಅಗತ್ಯವಿರುವಷ್ಟು) • ಈರುಳ್ಳಿ - ಚಿಕ್ಕದಾಗಿ ಕತ್ತರಿಸಿದ್ದು
ಕಪ್ಪು ಕವುನಿ ಹುರುಳಿ: ತಯಾರಿಸುವ ವಿಧಾನ ಮೊದಲು ದಪ್ಪ ತಳದ ಬಾಣಲೆಯನ್ನು ಬಿಸಿ ಮಾಡಿ. ಈಗ ಅದಕ್ಕೆ ಹುರುಳಿ, ಜೀರಿಗೆ ಮತ್ತು ಕರಿಮೆಣಸು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಅದನ್ನು ಒಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ಅದೇ ಬಾಣಲೆಯಲ್ಲಿ ಕಪ್ಪು ಕವುನಿ ಅಕ್ಕಿಯನ್ನು ಹಾಕಿ ಚೆನ್ನಾಗಿ ಹುರಿದು ತಣ್ಣಗಾಗಲು ಬಿಡಿ. ನಂತರ ಹುರಿದ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ಸ್ವಲ್ಪ ತರಿಯಾಗಿ ಪುಡಿ ಮಾಡಿ. ಇದನ್ನು ವಿಶಾಲವಾದ ಪಾತ್ರೆಯಲ್ಲಿ ಹಾಕಿ ತಣ್ಣಗಾಗಲು ಬಿಡಿ. ಈ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಗಂಜಿ ಮಾಡುವಾಗ ಅಗತ್ಯವಿರುವಷ್ಟು ಪುಡಿಯನ್ನು ಬಳಸಬಹುದು