ಛತ್ತೀಸಗಢ: ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ನಕ್ಸಲ್ ಸಾವುsecurity team encountered nuxcel death

ಛತ್ತೀಸಗಢ: ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ನಕ್ಸಲ್ ಸಾವುsecurity team encountered nuxcel death

NAXAL ENCOUNTER

 ಛತ್ತೀಸಗಢ: ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಛತ್ತೀಸ್‌ಗಢದ ಅಭುಜ್‌ಮಾದ್ ಪ್ರದೇಶದ ಕಾಡುಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಎನ್‌ಕೌಂಟರ್ ನಡೆದಿದೆ. ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ನಕ್ಸಲ್ ಮೃತಪಟ್ಟಿದ್ದು, ಆತನ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸಗಢದ ನಾರಾಯಣಪುರ ಜಿಲ್ಲೆಯ ಅಭುಜ್‌ಮಾದ್ ಸಮೀಪದ ಅರಣ್ಯದಲ್ಲಿ ನಕ್ಸಲರು ಅಡಗಿರುವ ಬಗ್ಗೆ ಮಾಹಿತಿ ಬಂದಿತು. ಈ ಮಾಹಿತಿ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಗೆಯನ್ನು ನಡೆಸುತ್ತಿದ್ದಾಗ ನಕ್ಸಲರಿಂದ ಗುಂಡಿನ ಚಕಮಕಿ ನಡೆದಿದೆ, ಪ್ರತಿಯಾಗಿ ಭದ್ರತಾ ಸಿಬ್ಬಂದಿ ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಓರ್ವ ಪುರುಷ ನಕ್ಸಲ್​ ಮೃತಪಟ್ಟಿದ್ದು, ಸದ್ಯ ಆತನ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ನಿರಂತರ ಗುಂಡಿನ ದಾಳಿ ಕೂಡ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ಒದಗಿಸಿದ್ದಾರೆ.

ಎನ್‌ಕೌಂಟರ್ ದೃಢ: ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುಡಿಯಾ ಅವರು ಇಂದು ಬೆಳಗ್ಗೆ ನಡೆದಿರುವ ಈ ಎನ್‌ಕೌಂಟರ್ ದೃಢಪಡಿಸಿದ್ದಾರೆ. ಅಭುಜ್‌ಮಾದ್ ಕಾಡಿನಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಘರ್ಷಣೆ ನಡೆದಿದೆ. ಇಲ್ಲಿಯವರೆಗೆ, ಒಬ್ಬ ಪುರುಷ ಮಾವೋವಾದಿಯ ಮೃತದೇಹವನ್ನು ಶಸ್ತ್ರಾಸ್ತ್ರಗಳ ಜೊತೆಗೆ ವಶಪಡಿಸಿಕೊಳ್ಳಲಾಗಿದ್ದು, ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಕೂಡ ಮುಂದುವರೆದಿದೆ ಎಂದು ಎಸ್ಪಿ ರಾಬಿನ್ಸನ್ ಮಾಹಿತಿ ನೀಡಿದ್ದಾರೆ.

ಮುಂದುವರಿದ ಗುಂಡಿನ ಚಕಮಕಿ: ಕಳೆದ ಎರಡು ದಿನಗಳಿಂದ, ಅಭುಜ್‌ಮಾದ್ ಪ್ರದೇಶದಲ್ಲಿ ಮಾವೋವಾದಿ ಚಲನವಲನದ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಸಿಗುತ್ತಿತ್ತು. ಇದರ ಆಧಾರದ ಮೇಲೆ, ಕಾರ್ಯಾಚರಣೆಗಾಗಿ ನಾರಾಯಣಪುರ ಪೊಲೀಸ್ ಮತ್ತು ಭದ್ರತಾ ಪಡೆಗಳ ಎರಡು ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿತ್ತು. ಸೋಮವಾರ ಬೆಳಗ್ಗೆ, ಭದ್ರತಾ ಪಡೆಗಳು ಮಹಾರಾಷ್ಟ್ರದ ಗಡಿಯಲ್ಲಿರುವ ಮೂಸ್ಫರ್ಶಿ ಅರಣ್ಯಗಳಲ್ಲಿ ನಕ್ಸಲರನ್ನು ಸುತ್ತುವರೆದಿದ್ದು, ಈ ವೇಳೆ ಎರಡೂ ಕಡೆಯಿಂದ ಗುಂಡಿನ ದಾಳಿ ಪ್ರಾರಂಭವಾಗಿದೆ.

ಓರ್ವ ನಕ್ಷಲ್​​ ಹತ್ಯೆ, ಶಸ್ತ್ರಾಸ್ತ್ರಗಳು ವಶ: ಭದ್ರತಾ ಪಡೆಗಳ ಪ್ರತಿದಾಳಿಯಲ್ಲಿ ಇಲ್ಲಿಯವರೆಗೆ ಒಬ್ಬ ನಕ್ಷಲ್ ಮೃತಪಟ್ಟಿದ್ದು, ಆತನ ಮೃತದೇಹ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಡೆಗಳು ಈ ಪ್ರದೇಶದಲ್ಲಿ ಇನ್ನೂ ಶೋಧ ನಡೆಸುತ್ತಿದ್ದು, ಎನ್‌ಕೌಂಟರ್ ಸ್ಥಳದಲ್ಲಿ ಇನ್ನಷ್ಟು ನಕ್ಸಲರು ಹತರಾಗಿರಬಹುದು ಎಂದು ಶಂಕಿಸಲಾಗಿದೆ. ಕಾರ್ಯಾಚರಣೆ ಪೂರ್ಣಗೊಂಡ ನಂತರ ವಿವರವಾದ ಮಾಹಿತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗರಿಯಾಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್‌ನಲ್ಲಿ 10 ನಕ್ಸಲೀಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹತ್ಯೆಯಾದವರ ಪೈಕಿ ನಿಷೇಧಿತ ಸಿಪಿಐ ಮಾವೋವಾದಿಯ ಹಿರಿಯ ನಾಯಕ ಮನೋಜ್ ಅಲಿಯಾಸ್ ಮೋಡೆಮ್ ಬಾಲಕೃಷ್ಣ (58) ಕೂಡ ಒಬ್ಬರಾಗಿದ್ದರು. ತೆಲಂಗಾಣದ ವಾರಂಗಲ್ ಜಿಲ್ಲೆಯ ನಿವಾಸಿಯಾಗಿದ್ದ ಬಾಲಕೃಷ್ಣ ತಲೆಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು.


Ads on article

Advertise in articles 1

advertising articles 2

Advertise under the article