ಮಂಗಳೂರು :ದೂರು ಹೇಳಿಕೊಂಡು ಬಂದ ಮಹಿಳೆಯನ್ನೇ ಕಾಮತೃಷೆಗಾಗಿ ದುರುಪಯೋಗ ; ಕಾವೂರು ಠಾಣೆಯ ಪೇದೆ ಬಂಧನ, ಕಮಿಷನರ್ ಸೂಚನೆಯಂತೆ ಮಹಿಳೆ ಪತಿಯೂ ಅರೆಸ್ಟ್ !

ಮಂಗಳೂರು :ದೂರು ಹೇಳಿಕೊಂಡು ಬಂದ ಮಹಿಳೆಯನ್ನೇ ಕಾಮತೃಷೆಗಾಗಿ ದುರುಪಯೋಗ ; ಕಾವೂರು ಠಾಣೆಯ ಪೇದೆ ಬಂಧನ, ಕಮಿಷನರ್ ಸೂಚನೆಯಂತೆ ಮಹಿಳೆ ಪತಿಯೂ ಅರೆಸ್ಟ್ !


ಮಂಗಳೂರು : ದೂರು ಹೇಳಿಕೊಂಡು ಬಂದ ಮಹಿಳೆಯನ್ನು ಪೊಲೀಸ್ ಪೇದೆಯೇ ದುರುಪಯೋಗ ಮಾಡಿಕೊಂಡು ತನ್ನ ಕಾಮತೃಷೆಗೆ ಬಳಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಆರೋಪಿ ಪೊಲೀಸ್ ಪೇದೆಯನ್ನು ಪೊಲೀಸ್ ಕಮಿಷನರ್ ಸೂಚನೆಯಂತೆ ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. 

ಸಂತ್ರಸ್ತ ಮಹಿಳೆ ತನ್ನನ್ನು ಪೊಲೀಸ್ ಪೇದೆಯೊಬ್ಬ ದುರ್ಬಳಕೆ ಮಾಡುತ್ತಿದ್ದಾನೆಂದು ನೇರವಾಗಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರನ್ನು ಭೇಟಿಯಾಗಿ ಅಳಲು ಹೇಳಿಕೊಂಡಿದ್ದರು. ಇದರಂತೆ, ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಕಾವೂರು ಠಾಣೆಯ ಪೊಲೀಸ್ ಪೇದೆ ಚಂದ್ರ ನಾಯಕ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಬಾಗಲಕೋಟೆ ಮೂಲದವನು ಎಂದು ತಿಳಿದುಬಂದಿದೆ. ‌

ಇದಲ್ಲದೆ, ಪ್ರಕರಣ ಸಂಬಂಧಿಸಿ ಸಂತ್ರಸ್ತ ಮಹಿಳೆಯ ಪತಿಯನ್ನೂ ಪೊಲೀಸರು ಬಂಧಿಸಿದ್ದಾರೆ.‌ ರಿಯಲ್ ಎಸ್ಟೇಟ್ ಮಾಡುತ್ತಿದ್ದ ಪತಿ ತನ್ನ ಪತ್ನಿಯ ನಗ್ನ ವಿಡಿಯೋ ಮಾಡಿಟ್ಟು ಕಿರುಕುಳ ನೀಡುತ್ತಿದ್ದನೆಂದೂ, ಅದರ ಬಗ್ಗೆ ತಿಳಿದ ಪೊಲೀಸ್ ಪೇದೆ ಚಂದ್ರ ನಾಯಕ್ ಆರೋಪಿ ಪತಿಯನ್ನು ಬೆದರಿಸಿ ವಿಡಿಯೋ ಡಿಲೀಟ್ ಮಾಡಿಸಿದ್ದ. ಆದರೆ, ಆನಂತರ ಮಹಿಳೆಯ ಅಸಹಾಯಕತೆ ಬಳಸಿಕೊಂಡು ತಾನೇ ದುರುಪಯೋಗ ಮಾಡಿಕೊಂಡಿದ್ದ. ಇದರಿಂದ ಬೇಸತ್ತ ಮಹಿಳೆ ನೇರವಾಗಿ ಪೊಲೀಸ್ ಕಮಿಷನರ್ ಭೇಟಿಯಾಗಿ ದೂರು ಹೇಳಿದ್ದರು

Ads on article

Advertise in articles 1

advertising articles 2

Advertise under the article