ಒಡಿಶಾ :ಲೈಂಗಿಕ ದೌರ್ಜನ್ಯ, ಕಾಲೇಜು ಆವರಣದಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸಂತ್ರಸ್ತೆ..!!
Sunday, July 13, 2025
ಒಡಿಶಾ : ಟೀಚರ್ ನೀಡಿದ ಲೈಂಗಿಕ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿಯೊಬ್ಬರು ಬೆಂಕಿ ಹಚ್ಚಿಕೊಂಡ ಘಟನೆ ಒಡಿಶಾದ ಭುವನೇಶ್ವರ ದಲ್ಲಿ ನಡೆದಿದೆ.
ಖಾಸಗಿ ಕಾಲೇಜಿನ B. ED ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿನಿಗೆ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದರು. ಇದ್ರಿಂದ ಬೇಸತ್ತ ವಿದ್ಯಾರ್ಥಿನಿ ಪ್ರಿನ್ಸಿಪಾಲ್ ಎದುರೇ ದೇಹಕ್ಕೆ ಬೆಂಕಿ ಇಟ್ಟುಕೊಂಡು ಆತ್ಮಕಹತ್ಯೆಗೆ ಯತ್ನಿಸಿದ್ದಾರೆ.
ಈ ಸಂಬಂಧ ಸಮೀರ್ ಕುಮಾರ್ ಸಾಹೋ ಎಂಬ ಟೀಚರ್ ಬಂಧನವಾಗಿದ್ದು, ಪ್ರಿನ್ಸಿಪಾಲ್ ನನ್ನು ಸಸ್ಪೆಂಡ್ ಮಾಡಲಾಗಿದೆ. ಸಂತ್ರಸ್ತ ವಿದ್ಯಾರ್ಥಿನಿಯ ದೇಹ ಶೇ 90ರಷ್ಟು ಸುಟ್ಟು ಕರಕಲಾಗಿದೆ. ಆಕೆಯನ್ನು ಬಚಾವ್ ಮಾಡಲು ಹೊರಟ ಮತ್ತೋರ್ವ ವಿದ್ಯಾರ್ಥಿನಿಗೆ ಸಹ ಗಂಭೀರ ಗಾಯವಾಗಿದೆ. ಸ್ಥಳೀಯ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.