ಕೇರಳ :ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಪ್ರಮುಖ ಆರೋಪಿಯನ್ನು ಬಂಧಿಸಿದ NIA.!!

ಕೇರಳ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಶುಕ್ರವಾರ ಜುಲೈ 4 ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಕತಾರ್‌ನಿಂದ ಆಗಮಿಸಿದ ನಂತರ ಅಬ್ದುಲ್ ರೆಹಮಾನ್‌ನನ್ನು ಬಂಧಿಸಿದೆ. ಪ್ರಮುಖ ದಾಳಿಕೋರರ ಬಂಧನದ ನಂತರ ಕತಾರ್ ಗೆ ಪರಾರಿಯಾಗಿದ್ದಾನೆ ಎಂಬ ಆರೋಪದ ಮೇಲೆ ಅಬ್ದುಲ್ ರೆಹಮಾನ್ ಸುಮಾರು ಎರಡು ವರ್ಷಗಳಿಂದ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ. ಎನ್‌ಐಎ ನಗದು ಬಹುಮಾನ ಘೋಷಿಸಿದ್ದ ಆರು ಆರೋಪಿಗಳಲ್ಲಿ ಈತನೂ ಒಬ್ಬನಾಗಿದ್ದ; ಆತನನ್ನು ಬಂಧಿಸಿದವರಿಗೆ 4 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಈ ವರ್ಷದ ಏಪ್ರಿಲ್‌ನಲ್ಲಿ NIA ಆರೋಪಪಟ್ಟಿ ಸಲ್ಲಿಸಿದ ನಾಲ್ವರು ವ್ಯಕ್ತಿಗಳಲ್ಲಿ ರೆಹಮಾನ್ ಕೂಡ ಒಬ್ಬ, ಪ್ರಕರಣದಲ್ಲಿ ಒಟ್ಟು ಆರೋಪಿಗಳ ಸಂಖ್ಯೆ 28 ಕ್ಕೆ ಏರಿದೆ.
ಪ್ರವೀಣ್ ನೆಟ್ಟಾರು ಅವರ ಕ್ರೂರ ಹತ್ಯೆ ಜುಲೈ 26, 2022 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಸಂಭವಿಸಿದೆ. ನೆಟ್ಟಾರು ಅವರ ಮೇಲೆ ಪಿಎಫ್‌ಐ ಸದಸ್ಯರು ಹರಿತವಾದ ಆಯುಧಗಳಿಂದ ದಾಳಿ ಮಾಡಿದ್ದರು.