ಪಶ್ಚಿಮ ಬಂಗಾಳ: ಒಂದೂವರೆ ವರ್ಷದ ಮಗುವನ್ನು ನದಿಗೆ ಎಸೆದ ತಾಯಿ.
Friday, July 4, 2025

ಜಲ್ಪೈಗುರಿ: ಬಡತನ ದಿಂದ ಬೆಸೆತ್ತು ತಾಯಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗುವನ್ನು ತೀಸ್ತಾ ನದಿಗೆ ಎಸೆದಿರುವ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ನಡೆದಿದೆ.
ಘಟನೆ ಸಮಯದಲ್ಲಿ ಅಲ್ಲೇ ಇದ್ದ ಸ್ಥಳೀಯರು ಕೂಡಲೇ ಓಡಿ ಬಂದು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮನೆಯಲ್ಲಿ ಅಡುಗೆ ಸಾಮಗ್ರಿಗಳೆಲ್ಲಾ ಖಾಲಿಯಾಗಿತ್ತು, ಹಸಿದ ಮಗು ದಿನವಿಡೀ ಅಳುತ್ತಿತ್ತು. ತಾಯಿಗೆ ಏನು ಮಾಡಬೇಕು ಎಂಬುದೇ ತೋಚಲಿಲ್ಲ. ಹಾಗಾಗಿ ಮಗು ಬದುಕಿದ್ದರೆ ತನಗೆ ಆ ಮಗುವಿನ ಹೊಟ್ಟೆ ತುಂಬಿಸುವ ಶಕ್ತಿಯೂ ಇಲ್ಲ ಎಂದು ಭಾವಿಸಿ ತಪ್ಪು ನಿರ್ಧಾರ ಮಾಡಿದ್ದರು.
ಸೀಮಾ ದಿನಗಟ್ಟಲೆ ಹೊಟ್ಟೆಗೆ ಕೂಳಿಲ್ಲದೆ ಇದ್ದರು, ಗಂಡ ಬಿಪುಲ್ ಬವಾಲಿ ಬಡಗಿ ಮತ್ತು ದಿನಗೂಲಿ ನೌಕರರಾಗಿದ್ದು, ಉತ್ತರ ಬಂಗಾಳದಲ್ಲಿ ಭಾರಿ ಮಳೆಯಿಂದಾಗಿ ಎಷ್ಟೇ ಹುಡುಕಿದರೂ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ ಚಿಂತಿತರಾಗಿದ್ದರು. ಗಂಡ ಕೆಲಸ ಹುಡುಕಿಕೊಂಡು ಹೊರಗೆ ಹೋಗಿದ್ದಾಗ ಪತ್ನಿ ಈ ದುಡುಕಿನ ನಿರ್ಧಾರ ಮಾಡಿದ್ದಾರೆ.