ಮಂಗಳೂರು :ಕೋಮು ಗಲಭೆ ನಿಗ್ರಹದ ಬಗ್ಗೆ ವಿಶೇಷ ಕಾರ್ಯಪಡೆ ಸಿಬ್ಬಂದಿಗೆ ತರಬೇತಿ ; ನೆಹರು ಮೈದಾನದಲ್ಲಿ ಪ್ರಾತ್ಯಕ್ಷಿಕೆ..!!

ಮಂಗಳೂರು :ಕೋಮು ಗಲಭೆ ನಿಗ್ರಹದ ಬಗ್ಗೆ ವಿಶೇಷ ಕಾರ್ಯಪಡೆ ಸಿಬ್ಬಂದಿಗೆ ತರಬೇತಿ ; ನೆಹರು ಮೈದಾನದಲ್ಲಿ ಪ್ರಾತ್ಯಕ್ಷಿಕೆ..!!

ಮಂಗಳೂರು, ಜುಲೈ 3 : ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ, ಕೋಮು ಸೌಹಾರ್ದ ಕಾಪಾಡುವ ದೃಷ್ಟಿಯಿಂದ ಸ್ಥಾಪನೆಯಾಗಿರುವ ವಿಶೇಷ ಕಾರ್ಯಪಡೆ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಉತ್ತಮ ಕಾರ್ಯಕ್ಷಮತೆಗಾಗಿ Anti Riots gun & Stun Shell ಬಳಸುವ ಬಗ್ಗೆ ನಗರದ ನೆಹರು ಮೈದಾನದಲ್ಲಿ ತರಬೇತಿ ನಡೆಯಿತು. 

ಕೋಮು ಗಲಭೆಗಳ ಸಂದರ್ಭಗಳಲ್ಲಿ ಉದ್ರಿಕ್ತ ಜನ ಸಮೂಹವನ್ನು ಚದುರಿಸುವ ಸಲುವಾಗಿ ಉಪಯೋಗಿಸುವ ದಂಗೆ ನಿರೋಧಕ ಆಶ್ರವಾಯು, ಜಲಫಿರಂಗಿ, ಸ್ಟನ್ ಶೆಲ್ ಬಳಕೆಯ ಬಗ್ಗೆ ತರಬೇತಿ ನೀಡಿ ಪ್ರಾತ್ಯಕ್ಷಿಕೆ ನಡೆಸಲಾಯಿತು. ತರಬೇತಿ ಮತ್ತು ಪ್ರಾತ್ಯಕ್ಷಕೆಯಲ್ಲಿ ವಿಶೇಷ ಕಾರ್ಯಪಡೆ ಘಟಕದ Operational wing ನ 95 ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. 

ಇದಲ್ಲದೆ, ಗುಪ್ತಚರ ವಿಭಾಗದ ಕೆಲವು ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸುವ ದ್ವೇಷ ಭಾಷಣ ಮುಂತಾದ ಮಾಹಿತಿಗಳನ್ನು ಸಂಗ್ರಹಿಸುವ ಕುರಿತು ಪರಿಣಾಮಕಾರಿಯಾಗಿ ತರಬೇತಿ ನೀಡಲಾಗಿದ್ದು ಕಾರ್ಯಪ್ರವೃತ್ತಿಗೆ ಸನ್ನದ್ದರಾಗಿದ್ದಾರೆ ಎಂದು ಮಂಗಳೂರು ಪೊಲೀಸ್ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

Ads on article

Advertise in articles 1

advertising articles 2

Advertise under the article