ಮಂಡ್ಯ: ಮೆಡಿಕಲ್ ಕಾಲೇಜ್‌ ಹಾಸ್ಟೆಲ್‌ನಲ್ಲಿ ಕೊಪ್ಪಳ ಮೂಲದ ವಿದ್ಯಾರ್ಥಿ ಆತ್ಮಹತ್ಯೆ..!!mandya MEDICAL STUDENT suicide

ಮಂಡ್ಯ: ಮೆಡಿಕಲ್ ಕಾಲೇಜ್‌ ಹಾಸ್ಟೆಲ್‌ನಲ್ಲಿ ಕೊಪ್ಪಳ ಮೂಲದ ವಿದ್ಯಾರ್ಥಿ ಆತ್ಮಹತ್ಯೆ..!!mandya MEDICAL STUDENT suicide

MEDICAL STUDENT DIED

ಮಂಡ್ಯ: ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಮಿಮ್ಸ್) ಹಾಸ್ಟೆಲ್​ನಲ್ಲಿ ನಡೆದಿದೆ. ಕೊಪ್ಪಳ ಮೂಲದ ಭರತ್ ಯತ್ತಿನಮನೆ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.

ಭಾನುವಾರ ರಾತ್ರಿ ಹಾಸ್ಟೆಲ್​ನ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಸ್ನೇಹಿತರು ಆತನ ರೂಮಿಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಂಡ್ಯದ ಪೂರ್ವ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, "ರಾತ್ರಿ 12 ಗಂಟೆಯವರೆಗೆ ಭರತ್ ತನ್ನ ಪಕ್ಕದ ರೂಮಿಗೆ ಹೋಗಿ ಸ್ನೇಹಿತರೊಂದಿಗೆ ಮಾತಾಡಿದ್ದಾನೆ. ಬಳಿಕ ತನ್ನ ರೂಮಿಗೆ ಬಂದು ಸಾವಿಗೆ ಶರಣಾಗಿದ್ದಾನೆ. ಈತನ ಜೊತೆ ರೂಮಿನಲ್ಲಿದ್ದ ಇಬ್ಬರು ಊರಿಗೆ ಹೋಗಿದ್ದರು. ಬೆಳಗ್ಗೆ ವಿದ್ಯಾರ್ಥಿಯೊಬ್ಬ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ" ಎಂದು ತಿಳಿಸಿದರು.

ಭರತ್ ಉತ್ತಮ ಫುಟ್​ಬಾಲ್​ ಆಟಗಾರನಾಗಿದ್ದ. ಕಳೆದ ವರ್ಷ ಭರತ್ ಹೆಚ್ಚು ಕಾಲೇಜಿಗೆ ಹಾಜರಾಗಿಲ್ಲ. ಹೀಗಾಗಿ ಮೊದಲ ವರ್ಷದ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿರಲಿಲ್ಲ. ಈ ವರ್ಷ ಪರೀಕ್ಷೆಗಳನ್ನು ಕ್ಲಿಯರ್ ಮಾಡಿಕೊಳ್ಳಬೇಕು ಅಂದುಕೊಂಡಿದ್ದ. ಹೀಗಾಗಿ ಪರೀಕ್ಷಾ ಶುಲ್ಕ ಕಟ್ಟಲು ಭರತ್ ಹಾಸ್ಟೆಲ್‌ಗೆ ಬಂದಿದ್ದ. ಆದರೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ‌ತಿಳಿದುಬಂದಿಲ್ಲ. ಪೋಷಕರಿಗೆ ಮಾಹಿತಿ ನೀಡಿದ್ದೇವೆ" ಎಂದು ಹೇಳಿದರು.


Ads on article

Advertise in articles 1

advertising articles 2

Advertise under the article