ಗುಜರಾತ್: Life style ಅಡುಗೆ ಮನೆಯೇ ಇಲ್ಲದ ಭಾರತದ ಈ ಹಳ್ಳಿ ಯಾವುದು; ವಿಶೇಷತೆಯೇನು?

ಗುಜರಾತ್: Life style ಅಡುಗೆ ಮನೆಯೇ ಇಲ್ಲದ ಭಾರತದ ಈ ಹಳ್ಳಿ ಯಾವುದು; ವಿಶೇಷತೆಯೇನು?

ಗುಜರಾತ್:ಈ ಹಳ್ಳಿಯಲ್ಲಿ ಯಾವ ಮನೆಗೆ ಹೋದ್ರು ಅಡುಗೆ ಮನೆ ಕಾಣಲು ಸಿಗಲ್ಲ. ಹಾಗಂತ ಈ ಊರಲ್ಲಿರುವ ಜನರು ಊಟ ಮಾಡದೇ ಉಪವಾಸ ಇರುತ್ತಾರಾ ಎನ್ನುವ ಪ್ರಶ್ನೆ ಮೂಡಬಹುದು.

ಹೌದು, ಈ ಗ್ರಾಮದಲ್ಲಿ ವೃದ್ಧರೇ ವಾಸಿಸುತ್ತಿದ್ದು, ಇಲ್ಲಿನ ಜನರು ಹೊತ್ತೊತ್ತಿಗೆ ಊಟ ತಿಂಡಿ ಮಾಡುತ್ತಾರೆ.

ಭಾರತದಲ್ಲಿದೆ ವಿಶಿಷ್ಟ ಗ್ರಾಮ
ಭಾರತದಲ್ಲಿರುವ ಈ ಗ್ರಾಮವು ತುಂಬಾನೇ ಅಭಿವೃದ್ಧಿಯಾಗಿದ್ದು, ಇಲ್ಲಿದ್ದ ಯುವಕರೆಲ್ಲರೂ ಒಳ್ಳೆಯ ಶಿಕ್ಷಣ ಪಡೆದು, ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಂಡು ಪಟ್ಟಣ ಸೇರಿದ್ದಾರೆ. ಹೀಗಾಗಿ ಇಲ್ಲಿ ಕಾಣಸಿಗುವವರು ವೃದ್ಧರು ಮಾತ್ರ. ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದ ಈ ಗ್ರಾಮದಲ್ಲಿ ಈಗ ಇರುವುದು 500 ಜನರು ಮಾತ್ರ. ಈ ವಿಶಿಷ್ಟ ಹಳ್ಳಿಯ ಹೆಸರು ಚಂದಂಕಿ, ಇದು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿದೆ. ಅಭಿವೃದ್ಧಿ ಕಂಡಿರುವ ಈ ಗ್ರಾಮಗಳಲ್ಲಿ ಕಾಂಕ್ರೀಟ್ ಹಾಕಿದ ರಸ್ತೆಗಳು ಹಾಗೂ ದಿನದ 24 ಗಂಟೆಗಳ ಕಾಲ ವಿದ್ಯುತ್ ಇರುತ್ತದೆ. ಆದ್ರೆ, ಈ ಗ್ರಾಮದ ಯಾವುದೇ ಮನೆಯಲ್ಲಿ ಅಡುಗೆ ಮನೆಯಿಲ್ಲ. ಹೀಗಾಗಿ ವಿಶಿಷ್ಟ ವ್ಯವಸ್ಥೆಯನ್ನು ಇಲ್ಲಿನ ಜನರು ಮಾಡಿಕೊಂಡಿದ್ದಾರೆ. ಕಮ್ಯುನಿಟಿ ಕಿಚನ್ ಎನ್ನುವ ವಿಶಿಷ್ಟ ವ್ಯವಸ್ಥೆಯಿದ್ದು, ಗ್ರಾಮಸ್ಥರು ಎಲ್ಲರೂ ಸೇರಿ ಒಂದೆಡೆ ಕುಳಿತು ಊಟ ಮಾಡುತ್ತಾರೆ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಚಂದಂಕಿ ಗ್ರಾಮದಲ್ಲಿ ಯಾವುದೇ ಮನೆಯಲ್ಲಿ ಅಡುಗೆ ಮಾಡುವುದೇ ಇಲ್ಲ. ಇಲ್ಲಿ ಕಮ್ಯುನಿಟಿ ಕಿಚನ್ ವ್ಯವಸ್ಥೆಯಿದ್ದು, ಇಲ್ಲಿರುವ ವೃದ್ಧರಿಗೆ ಬೇಕಾದ ಆಹಾರವನ್ನು ಇಲ್ಲಿಯೇ ತಯಾರಿಸಲಾಗುತ್ತದೆ. ಇಲ್ಲಿನ ಯುವಕರು ಪಟ್ಟಣಗಳಿಗೆ ಹೋದ ಕಾರಣ ಸಹಜವಾಗಿ ವೃದ್ಧರನ್ನು ಒಂಟಿಯಾಗಿದ್ದಾರೆ. ಹೀಗಾಗಿ ಮೂರೊತ್ತು ಊಟ ತಿಂಡಿಗೆ ವೃದ್ಧರೆಲ್ಲರೂ ಒಂದೆಡೆ ಸೇರುವ ಮೂಲಕ ಎಲ್ಲರೊಂದಿಗೆ ಬೆರೆತು ತಮ್ಮ ನೋವನ್ನು ಮರೆಯುತ್ತಾರೆ.

ಕಮ್ಯುನಿಟಿ ಕಿಚನ್ ಕಾರಣಿಕರ್ತರು ಯಾರು?
ಕಮ್ಯುನಿಟಿ ಕಿಚನ್ ಎನ್ನುವ ವಿಶಿಷ್ಟ ವ್ಯವಸ್ಥೆಯನ್ನು ಸ್ಥಾಪಿಸಿದ್ದು ಗ್ರಾಮದ ಸರಪಂಚ್ ಪೂನಂಬಾಯಿ ಪಟೇಲ್ ಎನ್ನುವ ವ್ಯಕ್ತಿ. ಗ್ರಾಮದಲ್ಲಿರುವ ಈ ಹಾಲ್ ನಲ್ಲಿ 35-40 ಜನರು ಒಟ್ಟಿಗೆ ಕುಳಿತು ಊಟ ಮಾಡಬಹುದು. ಇಲ್ಲಿ ಹವಾನಿಯಂತ್ರಿತ ವ್ಯವಸ್ಥೆಯೂ ಇದೆ. ಕಮ್ಯುನಿಟಿ ಕಿಚನ್ ನಲ್ಲಿ ಅಡುಗೆ ಮಾಡಲು ಅಡುಗೆ ಭಟ್ಟರನ್ನು ನೇಮಿಸಿಕೊಳ್ಳಲಾಗಿದ್ದು, ಇವರ ತಿಂಗಳ ಸಂಬಳ ಹನ್ನೊಂದು ಸಾವಿರ ರೂಪಾಯಿಯಂತೆ. ಇನ್ನು, ಮೆನುವಿನಲ್ಲಿ ದಾಲ್, ಅನ್ನ, ಚಪಾತಿ, ಖಿಚಡಿ ಭಕ್ರಿ-ರೋಟಿ, ಮೇಥಿ ಗೋಟಾ, ಧೋಕ್ಲಾ, ಇಡ್ಲಿ ಸಾಂಬಾರ್ ಸೇರಿದಂತೆ ವಿವಿಧ ಸಿಹಿತಿಂಡಿಗಳಿವೆ. ವೃದ್ಧರೆಲ್ಲರೂ ಒಟ್ಟು ಸೇರಿ ತಿಂಡಿ ಊಟ ಸವಿಯುತ್ತಾರೆ. ಇನ್ನೊಂದು ವಿಶೇಷವೆಂದರೆ ಮೊದಲು ಮಹಿಳೆಯರು ಆಹಾರ ಸೇವಿಸಿದ ಬಳಿಕ ಪುರುಷರು ಆಹಾರ ಸೇವಿಸುತ್ತಾರೆರಂತೆ. ಸಹೋದರತ್ವ ಹಾಗೂ ಏಕತೆಗೆ ಉದಾಹರಣೆಯಂತಿರುವ ಈ ವಿಶಿಷ್ಟ ಗ್ರಾಮವನ್ನು ನೋಡಲು ಬೇರೆ ಬೇರೆ ರಾಜ್ಯಗಳಿಂದ ಜನರು ಭೇಟಿ ನೀಡುತ್ತಾರೆ.

Ads on article

Advertise in articles 1

advertising articles 2

Advertise under the article