ಕರ್ನಾಟಕ :ರಾಜ್ಯದಲ್ಲಿ ಹೃದಯಾಘಾತ ಹೆಚ್ಚಳ ; ಪ್ರತ್ಯೇಕ ಸಮಿತಿಯಿಂದ ತಾಂತ್ರಿಕ ಅಧ್ಯಯನ, ಕೊರೊನಾ ಬಳಿಕ ಹೃದಯ ಸಮಸ್ಯೆ ಹೆಚ್ಚಿರುವುದು ಪತ್ತೆ..!!

ಕರ್ನಾಟಕ :ರಾಜ್ಯದಲ್ಲಿ ಹೃದಯಾಘಾತ ಹೆಚ್ಚಳ ; ಪ್ರತ್ಯೇಕ ಸಮಿತಿಯಿಂದ ತಾಂತ್ರಿಕ ಅಧ್ಯಯನ, ಕೊರೊನಾ ಬಳಿಕ ಹೃದಯ ಸಮಸ್ಯೆ ಹೆಚ್ಚಿರುವುದು ಪತ್ತೆ..!!


ಬೆಂಗಳೂರು, ಜುಲೈ 4 : ರಾಜ್ಯದಲ್ಲಿ ಹಾಸನ, ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಹೃದಯಘಾತದಿಂದ ಸರಣಿ ಸಾವು ಸಂಭವಿಸುತ್ತಿರುವುದು ಸರ್ಕಾರದ ನಿದ್ದೆಗೆಡಿಸಿದೆ. ಸರಣಿ ಹೃದಯಾಘಾತಕ್ಕೇನು ಕಾರಣ ಎಂಬ ಬಗ್ಗೆ ಅಧ್ಯಯನಕ್ಕೆ ರಾಜ್ಯ ಸರ್ಕಾರ ಎರಡು ಪ್ರತ್ಯೇಕ ತಾಂತ್ರಿಕ ಸಮಿತಿಗಳನ್ನು ರಚಿಸಿದ್ದು ತಜ್ಞರು ಅಧ್ಯಯನ ವರದಿ ತಯಾರಿಸುತ್ತಿದ್ದಾರೆ. ಶುಕ್ರವಾರ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಬೆಂಗಳೂರಿನಲ್ಲಿ ಸಭೆ ನಡೆಸಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ‌

ತಾಂತ್ರಿಕ ಸಲಹಾ ಸಮಿತಿ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ವರದಿಯಲ್ಲಿ ಹಲವು ಮಹತ್ವದ ವಿಚಾರಗಳಿದ್ದು ಕೊರೋನಾ ರೋಗದ ಬಳಿಕ ಹೃದಯಾಘಾತ ಹೆಚ್ಚಳವಾಗಿರುವುದನ್ನು ಎತ್ತಿ ತೋರಿಸಿದ್ದಾರೆ. ಕೊರೊನಾ ಸೋಂಕಿಗೊಳಗಾಗಿ ಗುಣಮುಖರಾದವರಿಗೆ ಹೃದಯ ಸಮಸ್ಯೆ ಹೆಚ್ಚು ಕಾಡುತ್ತಿದೆ. ಆದರೆ ಹೃದಯಘಾತಕ್ಕೆ ಕರೋನಾ ಲಸಿಕೆ ಕಾರಣವಲ್ಲ. ಕೊರೊನಾ ವೈರಸ್ ಸಮಸ್ಯೆ ಉಂಟು ಮಾಡುತ್ತಿದೆ ಎಂಬ ಮಾಹಿತಿಗಳು ವರದಿಯಲ್ಲಿವೆಯಂತೆ. 

ವರದಿಯಲ್ಲಿ ಹೃದಯದ ಕಾರ್ಯಕ್ಷಮತೆ ಕಡಿಮೆಯಾಗಿರುವ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ಕೊರೋನಾ ಬಂದ ಮೂರು ವರ್ಷದ ಬಳಿಕ ಹೃದಯ ಸಮಸ್ಯೆ ಕಂಡುಬರುತ್ತಿರುವುದು ಯಾಕೆ ಎನ್ನುವ ಬಗ್ಗೆಯೂ ತಜ್ಞರು ವಿಶ್ಲೇಷಣೆ ನಡೆಸಿದ್ದಾರೆ. ಅಲ್ಲದೆ, ಕರೋನಾ ಸೋಂಕಿಗೆ ಒಳಗಾದವರಿಗೆ ನಿದ್ರಾಹೀನತೆ, ಸುಸ್ತು, ಉಸಿರಾಟದ ಸಮಸ್ಯೆ, ಅತಿಯಾದ ಬೊಜ್ಜು ಕಂಡುಬರುತ್ತಿರುವುದನ್ನು ಪತ್ತೆ ಮಾಡಿದ್ದಾರೆ. 

ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆದಿದ್ದು ಸಭೆಯಲ್ಲಿ ವರದಿಯ ಬಗ್ಗೆ ಚರ್ಚೆ ನಡೆಸಲಾಯಿತು. ಸಾಧಕ-ಬಾಧಕಗಳ ಕುರಿತು  ಚರ್ಚಿಸಿದ್ದು ಅಂತಿಮ ವರದಿ ತಯಾರಿಸಿ ಮುಖ್ಯಮಂತ್ರಿಗೆ ನೀಡಲಿದ್ದಾರೆ.

Ads on article

Advertise in articles 1

advertising articles 2

Advertise under the article