ಉಡುಪಿ :ಈ ಚಾಲಾಕಿ ಹೆಂಗಸಿಗೆ ಜ್ಯುವೆಲರಿ ಅಂಗಡಿ ಮಾಲಕರೆ ಟಾರ್ಗೆಟ್..!! ನಿಮ್ಮ ಊರಿಗೂ ಬಂದಾಳು ಎಚ್ಚರಿಕೆ..!
Sunday, July 13, 2025
ಉಡುಪಿ: ಶಿರ್ವದಲ್ಲಿ ಹಲವು ಚಿನ್ನದ ಅಂಗಡಿಗಳಲ್ಲಿ ಚಿನ್ನಾಭರಣಗಳನ್ನು ಖರೀದಿಸಿ ಹಣ ನೀಡದೆ ವಂಚಿಸಿದ ಮಹಿಳೆಯು ಬಹುತೇಕ ಬಾರಿ ವಂಚಿಸುತ್ತಿದ್ದು ಚಿನ್ನದ ಅಂಗಡಿ ಮಾಲಕರನ್ನೇ..! ಜೊತೆಗೆ ಈಕೆ ಹಲವು ಮಂದಿಯೊಂದಿಗೆ ಬಡ್ಡಿ ವ್ಯವಹಾರದಲ್ಲೂ ತೊಡಗಿದ್ದಳಂತೆ.
ಮೂಲತಃ ಬಜಪೆಯ ಕುಪ್ಪೆಪದವು ನಿವಾಸಿ ಫರೀದಾ ಬೇಗಂ ವಂಚಕಿ. ಈಕೆಯಿಂದ ವಂಚನೆಗೆ ಒಳಗಾಗುತ್ತಿರುವವರೆಲ್ಲ ಜ್ಯುವೆಲ್ಲರಿ ಮಾಲಕರೇ ಆಗಿದ್ದಾರೆ. ಈಕೆ ಮೇಲೆ ಬಜಪೆ ಠಾಣೆಯನ್ನು 2020 ರಲ್ಲಿ ಪ್ರಕರಣದ ದಾಖಲಾಗಿತ್ತು. ನಕಲಿ ಚೆಕ್ ಬಳಸಿ ಗುರುಪುರ ಕೈಕಂಬದ ಜ್ಯುವೆಲರಿ ಒಂದರಿಂದ ಎರಡು ಲಕ್ಷ ರೂ ಮೌಲ್ಯದ ಚಿನ್ನಾಭರಣ ಖರೀದಿಸಿ ವಂಚಿಸಿದ್ದಳು. ಈಕೆಯ ಪತಿಯು ಇದಕ್ಕೆ ಸಾಥ್ ನೀಡಿದ್ದ ಎನ್ನಲಾಗಿದೆ. ನಕಲಿ ಚೆಕ್ ನೀಡಿ, ಮೂಡಬಿದಿರೆ ಠಾಣಾ ವ್ಯಾಪ್ತಿಯ ಚಿನ್ನದ ಅಂಗಡಿಯಿಂದ 30ಲ. ರೂ ಮೌಲ್ಯದ ಚಿನ್ನಾಭರಣ ಖರೀದಿಸಿ ವ್ಯಕ್ತಿ ಒಬ್ಬರಿಗೆ ವಂಚಿಸಿದ ಬಗ್ಗೆಯೂ ಪ್ರಕರಣ ದಾಖಲಾಗಿತ್ತು.
ಮಂಗಳೂರಿನಲ್ಲಿ ಕುಳಿತು ವ್ಯವಹಾರ:
ಈಕೆಯ ವ್ಯವಹಾರವೆಲ್ಲವೂ ಆನ್ಲೈನ್ ನಲ್ಲಿಯೇ. ನನಗೆ ಸಣ್ಣ ಮಗುವಿದ್ದು ನಾಮಕರಣ ಇರುವ ಕಾರಣ ಚಿನ್ನಾಭರಣ ಅಗತ್ಯವಿದೆ ಚೆಕ್ ನೀಡುತ್ತೇನೆ. ಡಿಸೈನ್ ತೋರಿಸಿ ಹುಡುಗರನ್ನು ಕಳುಹಿಸುತ್ತೇನೆ ಎಂದು ಹೇಳಿ ಜುವೆಲ್ಲರಿ ಮಾಲಕರನ್ನು ನಂಬಿಸುತ್ತಾಳೆ ಈಕೆಯ ಮಾತಿಗೆ ಮರುಳಾಗುವ ಕೆಲವು ಮಂದಿ ಡಿಸೈನ್ ಗಳನ್ನು ಆಕೆಗೆ ವಾಟ್ಸಪ್ ಮಾಡಿ ಅದರಲ್ಲಿ ಬೇಕಿರುವುದನ್ನು ಆರಿಸಿಕೊಂಡು ವ್ಯಕ್ತಿ ಒಬ್ಬನನ್ನು ಕಳುಹಿಸುತ್ತಾರೆ ಆತ ಅಂಗಡಿಗೆ ಬಂದು ಚೆಕ್ ನೀಡಿ ಆಭರಣಗಳನ್ನು ಕೊಂಡೊಯ್ದು ಆಕೆಗೆ ಒಪ್ಪಿಸುತ್ತಾನೆ.
ಎಂದೆರಲ್ಲಿ ವಂಚನೆ..!!
ಒಂದು ಕಡೆ ಪ್ರಕರಣ ದಾಖಲಾಗುತ್ತಿದ್ದಂತೆ ಈಕೆ ತನ್ನ ವ್ಯಾಪ್ತಿಯನ್ನು ಬೇರೆಡೆಗೆ ವರ್ಗಾಯಿಸುತ್ತಾಳೆ. ಈ ಹಿಂದೆ ಬಜಪೆ ಮೂಡಬಿದ್ರೆ ಸಹಿತ ಇತರ ಕಡೆ ಪ್ರಕರಣಗಳು ದಾಖಲಾದ ಮೇಲೆ ಶಿರ್ವದ ಕಡೆಗೆ ಕಣ್ಣು ಹಾಯ್ಸಿದ್ದಳು. ಇಲ್ಲಿಯೂ ಲಕ್ಷಾಂತರ ರೂ ವಂಚನೆ ಮಾಡಿ ಪ್ರಕರಣ ದಾಖಲಾಗಿದೆ.
ನಿಮ್ಮ ಊರಿಗೂ ಬಂದಾಳು ಎಚ್ಚರಿಕೆ
ಹೀಗೆ ಒಮ್ಮೆ ಸಿಕ್ಕಿ ಬಿದ್ದಾಗ ಕೆಲಕಾಲ ಈ ಕೃತ್ಯದಲ್ಲಿ ತೊಡಗುವುದಿಲ್ಲ. ಸ್ವಲ್ಪ ದಿನಗಳಾದ ಬಳಿಕ ಆಕೆ ಮತ್ತೆ ವಂಚನೆಗೆ ತೊಡಗುತ್ತಾಳೆ. ಹಾಗಾಗಿ ನಿಮ್ಮ ಊರಿಗೂ ಬಂದಾಳು ಎಚ್ಚರವಿರುವುದು ಒಳಿತು. ತನಿಖೆ ಮುಂದುವರಿದಿದೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಹೂಡಿಕೆ ಆಮಿಷವೊಡ್ಡಿ ಹಣ ಪಡೆದಿದ್ದಾಳೆ ನಮ್ಮ ಮಾಹಿತಿ ಇದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ತಿಳಿಸಿದ್ದಾರೆ.