ಹಾಸನ: ಸರಣಿ ಹೃದಯಾಘಾತ ಪ್ರಕರಣಗಳಿಗೆ ಕಾರಣವೇನು?; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಚಿವ ದಿನೇಶ್ ಗುಂಡೂರಾವ್.

ಹಾಸನ: ಸರಣಿ ಹೃದಯಾಘಾತ ಪ್ರಕರಣಗಳಿಗೆ ಕಾರಣವೇನು?; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಚಿವ ದಿನೇಶ್ ಗುಂಡೂರಾವ್.

ಬೆಂಗಳೂರು: ರಾಜ್ಯದ ಜನರನ್ನ ಬೆಚ್ಚಿ ಬೀಳಿಸಿದ್ದ ಹಾಸನದ ಸರಣಿ ಹೃದಯಾಘಾತ ಪ್ರಕರಣಗಳಿಗೆ ಕೊನೆಗೂ ಕಾರಣ ಪತ್ತೆಯಾಗಿದ್ದು, ಸರ್ಕಾರ ರಚನೆ ಮಾಡಿದ್ದ ತನಿಖಾ ತಂಡ ಇದೀಗ ವರದಿ ನೀಡಿದೆ.

ಸದ್ಯದ ಮಾಹಿತಿ ಪ್ರಕಾರ ಮೇ ಹಾಗೂ ಜೂನ್ ತಿಂಗಳಿನಲ್ಲಿ ಒಟ್ಟು 24 ಜನರು ಹೃದಯಾಘಾತದಿಂದ ಸತ್ತಿದ್ದಾರೆ ಎನ್ನಲಾಗಿತ್ತು. ಇನ್ನು 24 ಜನರಲ್ಲಿ 20 ಜನರಿಗೆ ಹೃದಯಾಘಾತ ಆಗಿ ಸಾವನ್ನಪ್ಪಿದ್ದಾರೆ ಎಂದು ಸಮಿತಿ ಹೇಳಿದ್ದು, ಉಳಿದ 4 ಜನರಲ್ಲಿ ಹೃದಯಾಘಾತವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿ ಪ್ರಕಾರ, 4 ಜನರಲ್ಲಿ ಒಬ್ಬರಿಗೆ ಕಿಡ್ನಿ ಸಮಸ್ಯೆ ಮತ್ತು ಮತ್ತೊಬ್ಬರಿಗೆ ಆಕ್ಸಿಡೆಂಟ್ ಆಗಿ ಸಾವನ್ನಪ್ಪಿದ್ದಾರೆ. ಉಳಿದಂತೆ ಮೂರನೇ ವ್ಯಕ್ತಿಗೆ ಗ್ಯಾಸ್ಟ್ರಿಕ್‌ ಸಮಸ್ಯೆ ಜಾಸ್ತಿ ಆಗಿ ಅದರಿಂದ ಬಿಪಿ ಹೆಚ್ಚಾಗಿ ಮೃತಪಟ್ಟಿದ್ದಾರೆ. ಹಾಗೆಯೇ, ನಾಲ್ಕನೇಯ ವ್ಯಕ್ತಿಗೆ ಇತರ ಆರೋಗ್ಯ ಸಮಸ್ಯೆಗಳಿತ್ತು ಎನ್ನಲಾಗಿದೆ.

ಉಳಿದ 20 ಪ್ರಕರಣಗಳಲ್ಲಿ 3 ನಾನ್ ಹಾರ್ಟ್ ಅಟ್ಯಾಕ್ ಸಾವಾಗಿದ್ದರೆ, ಇನ್ನೂ ಮೂವರಿಗೆ ಈ ಮೂದಲೇ ಹೃದಯಾಘಾತವಾಗಿತ್ತು ಅದರ ಪರಿಣಾಮದಿಂದ ಮತ್ತೆ ಹೃದಯಾಘಾತವಾಗಿ ಸಾವಿಗೀಡಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗೆಯೇ, 7 ಜನರ ಸಾವಿನ ಪ್ರಕರಣದಲ್ಲಿ ಪೋಸ್ಟ್‌ ಮಾರ್ಟಮ್‌ ಮಾಡಲಾಗಿದ್ದು, 6 ಮರಣೋತ್ತರ ಪರೀಕ್ಷೆಗಳ ವರದಿ ಬಂದಿದ್ದು, ಕೇವಲ ಒಂದು ಸಾವಿನ ಬಗ್ಗೆ ಮಾತ್ರ ವರದಿ ಬರಬೇಕಿದೆ. ಈ ವರದಿಯಲ್ಲಿ ತಿಳಿದು ಬಂದ ವಿಚಾರ ಮಾತ್ರ ನಿಜಕ್ಕೂ ಆತಂಕಕ್ಕೆ ಕಾರಣವಾಗಿದ್ದು, ಆರು ಜನರಲ್ಲಿ ಸುಮಾರು 5 ಜನರಿಗೆ ಸಡನ್ ಕಾರ್ಡಿಯಾಕ್ ಅರೆಸ್ಟ್ ಆಗಿ ಸಾವನ್ನಪ್ಪಿದ್ದಾರೆ. ಅದರಲ್ಲೂ ಹೃದಯದಲ್ಲಿ ಬ್ಲಡ್ ಕ್ಲಾಟ್‌ ಮೃತಪಟ್ಟಿದ್ದಾರೆ ಎಂದು ಸಮಿತಿ ತಿಳಿಸಿದೆ.

ವರದಿ ಸಲ್ಲಿಕೆ ಬಳಿಕ ಸಚಿವ ದಿನೇಶ್ ಗುಂಡುರಾವ್ ತಾಂತ್ರಿಕ ಸಮಿತಿ ಸದಸ್ಯರ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡುರಾವ್, ಹಾಸನದಲ್ಲಿ ಜನರು ಹೃದಯಾಘಾತದಿಂದ ಸಾವಿಗೀಡಾಗಿರುವುದಕ್ಕೆ ಕಾರಣ ಮಧುಮೇಹ, ಮದ್ಯಪಾನ ಮತ್ತು ಕುಟುಂಬದ ಹಿನ್ನೆಲೆ ಅಂತ ವರದಿ ಮೂಲಕ ತಿಳಿದುಬಂದಿದೆ ಎಂದು ಹೇಳಿದರು.


Ads on article

Advertise in articles 1

advertising articles 2

Advertise under the article