ಮೂಡಬಿದಿರೆ:ಕಾಲೇಜು ಉಪನ್ಯಾಸಕರಿಂದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್!!!. ಮೂವರು ಅರೆಸ್ಟ್..!!

ಮೂಡಬಿದಿರೆ:ಕಾಲೇಜು ಉಪನ್ಯಾಸಕರಿಂದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್!!!. ಮೂವರು ಅರೆಸ್ಟ್..!!

ಮಂಗಳೂರು : ಕಾಲೇಜು ಉಪನ್ಯಾಸಕರೇ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆಸಿದ ಘಟನೆ ದಕ್ಷಿಣ ಕನ್ನಡದ ಮೂಡುಬಿದರೆಯಲ್ಲಿ ನಡೆದಿದೆ.

ಮೂಡುಬಿದರೆಯ ಕಾಲೇಜು ಉಪನ್ಯಾಸಕರು ಈ ಕೃತ್ಯ ಎಸಗಿದ್ದು, ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

ಮೂಡುಬಿದರೆ ಖಾಸಗಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ, ಹಾಗೂ ಬಯೋಲಜಿ ಉಪನ್ಯಾಸಕ ಸಂದೀಪ್ ಎಂಬಾತ ಹಾಗೂ ವಿದ್ಯಾರ್ಥಿನಿ ಗೆಳೆಯ ಅನೂಪ್ ಎಂಬುವವರು ಅತ್ಯಾಚಾರ ಎಸಗಿದ್ದು, ಈ ಕುರಿತು ಮಹಿಳಾ ಆಯೋಗಕ್ಕೆ ವಿದ್ಯಾರ್ಥಿನಿ ದೂರು ನೀಡಲಾಗಿದೆ. ಮಹಿಳಾ ಆಯೋಗದ ಸೂಚನೆಯ ಮೇರೆಗೆ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ.

ಘಟನೆ ಹಿನ್ನೆಲೆ
ಸಂತ್ರಸ್ತ ವಿದ್ಯಾರ್ಥಿನಿ ಪಿಯುಸಿ ವ್ಯಾಸಂಗ ಮಾಡುತಿದ್ದ ಸಂದರ್ಭದಲ್ಲಿ ನರೇಂದ್ರ ಮತ್ತು ಸಂದೀಪ್ ಆಕೆಯ ಸಂಪರ್ಕದಲ್ಲಿದ್ದರು. ನಂತರ ನೋಟ್ಸ್ ಕೊಡುವ ನೆಪದಲ್ಲಿ ಆಕೆಗೆ ಸಹಾಯ ಮಾಡುವ ನೆಪದಲ್ಲಿ ಉಪನ್ಯಾಸಕ ನರೇಂದ್ರ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ, ಈ ವಿಚಾರ ಬಯಾಲಜಿ ಉಪನ್ಯಾಸಕ ಸಂದೀಪ್ ಗೆ ತಿಳಿಸುತ್ತಾನೆ.

ಈ ವಿಚಾರ ತಿಳಿದ ಸಂದೀಪ್ ವಿದ್ಯಾರ್ಥಿನಿಗೇ ಹೆದರಿಸಿ, ಬೆದರಿಸಿ ಬ್ಲಾಕ್ ಮೇಲ್ ಮಾಡುತ್ತಾನೆ. ನನ್ನ ಬಳಿ ನಿನ್ನ ಅಶ್ಲೀಲ ಫೋಟೋ, ವಿಡಿಯೋ ಇದೆ. ನನ್ನ ಜೊತೆ ಸಹಕರಿಸದೇ ಇದ್ರೆ ವೈರಲ್ ಮಾಡುತ್ತೇನೆ ಎಂದು ಸಂದೀಪ್ ಅತ್ಯಾಚಾರ ಎಸಗುತ್ತಾನೆ. ನಂತರ ಮಾರತಹಳ್ಳಿಯ ವಿದ್ಯಾರ್ಥಿನಿಯ ಗೆಳೆಯನಾಗಿರುವ ಅನೂಪ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗುತ್ತಾನೆ. ಬಳಿಕ ಈ ವಿಚಾರ ವಿದ್ಯಾರ್ಥಿನಿ ಪೋಷಕರಿಗೆ ತಿಳಿಸಿದ್ದು. ನಂತರ ಮಹಿಳಾ ಆಯೋಗಕ್ಕೆ ದೂರು ನೀಡುತ್ತಾರೆ. ಈ ಸಂಬಂಧ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.


Ads on article

Advertise in articles 1

advertising articles 2

Advertise under the article