ತುಮಕೂರು:ಗುಹೆಯಿಂದ ಫಾರಿನ್ ಡಿಟೆನ್ಷನ್ ಸೆಂಟರ್​ಗೆ ರಷ್ಯಾ ಮಹಿಳೆ ಶಿಫ್ಟ್​; ಕಾಣಲು ಬಂದ ಮಾಜಿ ಪತಿಗೆ ನಿರಾಸೆ.

ತುಮಕೂರು:ಗುಹೆಯಿಂದ ಫಾರಿನ್ ಡಿಟೆನ್ಷನ್ ಸೆಂಟರ್​ಗೆ ರಷ್ಯಾ ಮಹಿಳೆ ಶಿಫ್ಟ್​; ಕಾಣಲು ಬಂದ ಮಾಜಿ ಪತಿಗೆ ನಿರಾಸೆ.


RUSSIAN WOMAN

ತುಮಕೂರು: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಗೋಕರ್ಣ ಬಳಿಕ ರಾಮತೀರ್ಥ ಗುಡ್ಡದ ಅಪಾಯಕಾರಿ ಗುಹೆಯಲ್ಲಿದ್ದ ರಷ್ಯಾ ಮಹಿಳೆ ನಿನಾ ಕುಟಿನಾ ಅವರು ತಮ್ಮ ಮಕ್ಕಳೊಂದಿಗೆ ತುಮಕೂರು ತಾಲೂಕಿನ ಫಾರಿನ್ ಡಿಟೆನ್ಷನ್ ಸೆಂಟರ್‌ನಲ್ಲಿದ್ದು, ಈ ಸ್ಥಳಾಂತರದ ಬಗ್ಗೆ ಮಾಹಿತಿ ಪಡೆದ ಮಾಜಿ ಪತಿ ಡ್ರೋರ್ ಗೋಲ್ಡ್‌ಸ್ಟೈನ್, ತನ್ನ ಸಂಗಾತಿಯನ್ನು ಭೇಟಿ ಮಾಡಲು ಶುಕ್ರವಾರ ಇಲ್ಲಿಗೆ ಬಂದಿದ್ದರು.

ಮಕ್ಕಳನ್ನು ನೋಡಲು ಅವಕಾಶ ಮಾಡಿಕೊಡುವಂತೆ ಮಾಜಿ ಪತಿ ಡ್ರೋರ್, ಫಾರಿನ್ ಡಿಟೆನ್ಷನ್ ಸೆಂಟರ್‌ನಲ್ಲಿದ್ದ ಎಫ್​ಆರ್​ಆರ್​ ಅಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ. ಆದರೆ, ಕೆಲವು ಕಾರಣಗಳಿಂದ ಕುಟುಂಬವನ್ನು ಭೇಟಿ ಮಾಡಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ಕಾದು ಕಾದು ಸುಸ್ತಾದ ಡ್ರೋರ್, ವಾಪಾಸ್ ಬೆಂಗಳೂರಿಗೆ ತೆರಳಿದರು. ಆದರೆ, ಅದಕ್ಕೂ ಮುನ್ನ ನಿನಾ ಕುಟಿನಾ ತನ್ನ ಮಕ್ಕಳೊಂದಿಗೆ ಕಟ್ಟಡದ ಕಿಟಕಿಯಿಂದ ದೂರದಿಂದಲೇ ಮಾಜಿ ಪತಿಗೆ ಕೈಬೀಸುತ್ತಾ ಮೌನ ಮಾತುಕತೆ ಮಾಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಮಕ್ಕಳಿಗೆ ಗಿಫ್ಟ್ ತಂದಿದ್ದ ಡ್ರೋರಾ, ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ನಿರಾಶೆಯಿಂದ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದು, ಮತ್ತೆ ಬರುವುದಾಗಿ ಹೇಳಿದ್ದಾರೆ.


ಅಪಾಯಕಾರಿ ಗುಹೆಯಲ್ಲಿದ್ದ ನಿನಾ ಕುಟಿನಾ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ತುಮಕೂರಿನ ಫಾರಿನ್ ಡಿಟೆನ್ಷನ್ ಸೆಂಟರ್​ಗೆ (ವೀಸಾ ನಿಯಮ ಉಲ್ಲಂಘಿಸಿ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ನಿರ್ಬಂಧಿತ ಕೇಂದ್ರ) ಕರೆತರಲಾಗಿದೆ. ತಾತ್ಕಾಲಿಕವಾಗಿ ಇಲ್ಲಿ ಆಶ್ರಯ ಕಲ್ಪಿಸಲಾಗಿದ್ದು, ಸದ್ಯ ಆಕೆಯೊಂದಿಗೆ ಅವರ ವಕೀಲರು ಕೂಡ ಇದ್ದಾರೆ. ಸೋಮವಾರ ಸಂಜೆ 5.30ರ ಸುಮಾರಿಗೆ ಇಲ್ಲಿಗೆ ಕರೆತ ತಂದ ಬಳಿಕ ಮಂಗಳವಾರ ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿಗಳು ಭೇಟಿ ನೀಡಿ ಈ ಮಹಿಳೆಯನ್ನು ವಿಚಾರಣೆ ನಡೆಸಿದ್ದರು. ಸದ್ಯ ಈ ನಿರಾಶ್ರಿತರ ಕೇಂದ್ರದಲ್ಲಿ ಈ ಮೂವರಿಗೆ ಸರ್ಕಾರದ ನೀತಿ ನಿಯಮಾವಳಿಗಳಂತೆ ಆಹಾರವನ್ನು ನೀಡಲಾಗುತ್ತಿದೆ.

ಗೋಕರ್ಣದ ಗುಹೆಯಲ್ಲಿ ಪತ್ತೆಯಾಗಿದ್ದ ಮಹಿಳೆ: ಜುಲೈ 11ರಂದು ಪೊಲೀಸ್ ಗಸ್ತು ತಿರುಗುತ್ತಿದ್ದ ವೇಳೆ ಗೋಕರ್ಣದ ರಾಮತೀರ್ಥ ಬೆಟ್ಟದ ಮೇಲಿರುವ ಗುಹೆಯಲ್ಲಿ ರಷ್ಯಾದ ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರಿಯರು ಕಂಡುಬಂದಿದ್ದರು. ಅಧ್ಯಾತ್ಮ, ಧ್ಯಾನಕ್ಕಾಗಿ ಗೋವಾದಿಂದ ಗೋಕರ್ಣಕ್ಕೆ ಬಂದಿರುವುದಾಗಿ ಆಕೆ ತಿಳಿಸಿದ್ದರು. ಅಪಾಯಕಾರಿ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.

ಬ್ಯುಸಿನೆಸ್​ ವೀಸಾದಲ್ಲಿ ಭಾರತಕ್ಕೆ: ಬ್ಯುಸಿನೆಸ್​ ವೀಸಾದಲ್ಲಿ ರಷ್ಯಾದಿಂದ ಭಾರತಕ್ಕೆ ಬಂದಿದ್ದ ನೀನಾ ಕುಟಿನಾ 2018ರಲ್ಲಿ ಗೋವಾದಲ್ಲಿದ್ದರು. ಹಿಂದೂ ಧರ್ಮ ಹಾಗೂ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳಿಗೆ ಆಕರ್ಷಿತರಾಗಿದ್ದ, ಕುಟಿನಾ ಕರಾವಳಿ ನಗರವಾದ ಗೋಕರ್ಣಕ್ಕೆ ಬಂದು, ಇತ್ತೀಚೆಗಷ್ಟೇ ಮಕ್ಕಳೊಂದಿಗೆ ಈ ಕಾಡಿನ ಗುಹೆಯಲ್ಲಿ ಏಕಾಂತದಲ್ಲಿ ವಾಸಿಸುತ್ತಿದ್ದರು. ಇವರ ವಾಸ ಪೊಲೀಸರ ಕಣ್ಣಿಗೆ ಬಿದ್ದಿತ್ತು.

Ads on article

Advertise in articles 1

advertising articles 2

Advertise under the article