ಹರಿಯಾಣ: ಶಾಲೆಯಲ್ಲಿ ಗದರಿದ್ದಕ್ಕೆ ಪ್ರಾಂಶುಪಾಲರನ್ನೇ ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿಗಳು!
Thursday, July 10, 2025

ಹರಿಯಾಣ: ಕ್ಷೌರ ಮಾಡಿಕೊಂಡು ಬನ್ನಿ ಎಂದು ಪದೇಪದೆ ಗದರಿದ ಪ್ರಾಂಶುಪಾಲರನ್ನೇ ಇಬ್ಬರು ವಿದ್ಯಾರ್ಥಿಗಳು ಕೊಂದಿರುವ ಘಟನೆ ಹರಿಯಾಣದ ಹಿಸಾರ ಜಿಲ್ಲೆಯಲ್ಲಿ ನಡೆದಿದೆ.
ಪಿಯುಸಿಯ 11ನೇ ಮತ್ತು 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು, ಪ್ರಾಂಶುಪಾಲ ಜಗ್ಬೀರ್ ಸಿಂಗ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ನಾರ್ನೌಂಡ್ ಉಪವಿಭಾಗದ ಬಾಸ್ ಗ್ರಾಮದಲ್ಲಿರುವ ಕರ್ತಾರ್ ಸ್ಮಾರಕ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಪ್ರಾಥಮಿಕ ತನಿಖೆಯಲ್ಲಿ ಜಗ್ಬೀರ್ ಸಿಂಗ್ ಇಬ್ಬರೂ ವಿದ್ಯಾರ್ಥಿಗಳಿಗೆ ಕೂದಲು ಕತ್ತರಿಸಿಕೊಂಡು ಶಾಲೆಯಲ್ಲಿ ಶಿಸ್ತನ್ನು ಪಾಲಿಸುವಂತೆ ಸೂಚಿಸಿದ್ದರು.ಇದರಿಂದ ಕೋಪಗೊಂಡ ಇಬ್ಬರೂ ಅಪ್ರಾಪ್ತ ವಯಸ್ಕರು ಪ್ರಾಂಶುಪಾಲರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.