ಬೆಂಗಳೂರು :ಸಿಎಂ ಅವರಿಂದ ಸನ್ಮಾನಕ್ಕೊಳಗಾಗಿದ್ದು ಪೂರ್ವಜನ್ಮದ ಪುಣ್ಯ: 500ನೇ ಕೋಟಿ ಟಿಕೆಟ್ ಪಡೆದ ಮಹಿಳೆ ಹೇಳಿದ್ದೇನು?
Monday, July 14, 2025
ಬೆಂಗಳೂರು: ಶಕ್ತಿ ಯೋಜನೆಯ 500 ನೇ ಕೋಟಿಯ ಟಿಕೆಟ್ ನ್ನು ಸಿಎಂ ಸಿದ್ದರಾಮಯ್ಯ ವಿತರಿಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ, ಭಾಗಿಯಾಗಿದ್ದರು.
ಚಲಿಸುವ ಬಸ್ಸಲ್ಲೇ ಮಾತಾಡಿದ ಸೌಮ್ಯ, ಮಹಿಳೆಯರು 500 ಕೋಟಿ ಸಲ ಬಸ್ಸುಗಳಲ್ಲಿ ಪ್ರಯಾಣಿಸಿರುವುದು ಹೆಮ್ಮೆಯ ಸಂಗತಿ, ಮಹಿಳೆಯರು ಸ್ವಾವಲಂಬಿಗಳಾಗಿ ಸ್ವಾಭಿಮಾನದ ಬದುಕು ನಡೆಸಲಿ ಎಂಬ ಉದ್ದೇಶದಿಂದ ತಮ್ಮ ಸರ್ಕಾರ ಶಕ್ತಿಯೋಜನೆಯನ್ನು ಜಾರಿಗೊಳಿಸಿದೆ, ವಿಜಯಪುರದ ಮಹಿಳೆಯೊಬ್ಬರು ರೊಟ್ಟಿಗಳನ್ನು ಮಾಡಿಕೊಂಡು ಇಲ್ಲಿಗೆ ತಂದು ಮಾರಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ, ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಯೋಜನೆಯನ್ನು ಆರಂಭಿಸಿರುವ ಸರ್ಕಾರಕ್ಕೆ ಧನ್ಯವಾದಗಳು ಎಂದು ಹೇಳಿದರು.