ಅಸ್ಸಾಂ :ವಿಚ್ಛೇದನ ಸಿಕ್ಕಿದ ಖುಷಿಯಲ್ಲಿ 4 ಬಕೆಟ್ ಹಾಲು ಸುರಿದುಕೊಂಡು ಸಂಭ್ರಮಿಸಿದ ಪತಿ!;ವೈರಲ್ ಆದ ವಿಡಿಯೋ..!!
Sunday, July 13, 2025
ಅಸ್ಸಾಂ: ಪತ್ನಿಯಿಂದ ವಿಚ್ಛೇದ ಸಿಕ್ಕಿದ್ದಕ್ಕೆ ಖುಷಿಯಿಂದ 40 ಲೀಟರ್ ಹಾಲಿನಿಂದ ಸ್ನಾನವನ್ನು ಮಾಡಿ ಪತಿಯೊಬ್ಬ ಸಂಭ್ರಮಿಸಿದಂತ ಘಟನೆ ಅಸ್ಸಾಂ ನಲ್ಲಿ ನಡೆದಿದೆ.
ಅಸ್ಸಾಂ ರಾಜ್ಯದ ನಲ್ಬರಿ ಜಿಲ್ಲೆಯ ಬಾರ್ಲಿಯಾಪರ್ ನಲ್ಲಿ ಮಾಣಿಕ್ ಅಲಿ ಎಂಬಾತನೇ ಹೀಗೆ ಸ್ನಾನ ಮಾಡಿದಂತ ಪತಿಯಾಗಿದ್ದಾನೆ.
ಹೀಗೆ ಹಾಲಿನಿಂದ ಸ್ನಾನ ಮಾಡಿದಂತ ವೀಡಿಯೋ ವೈರಲ್ ಆಗಿದೆ.
ವೀಡಿಯೋದಲ್ಲಿ ನಾನು ಈಗ ಸ್ವತಂತ್ರ ಎಂಬುದಾಗಿ ಹೇಳಿಕೊಂಡಿರುವಂತ ಮಾಣಿಕ್ ಆಲಿ, ಕಾನೂನಿನ ಮೂಲಕ ಪತ್ನಿಯಿಂದ ವಿಚ್ಛೇದನ ಪಡೆದಿದ್ದೇನೆ. ಇಂದಿನಿಂದ ನಾನು ಸ್ವತಂತ್ರ ಎಂದಿದ್ದಾನೆ.
ಪತ್ನಿಯಿಂದ ವಿಚ್ಛೇದನ ಪಡೆದ ನಾನು ಶುದ್ಧೀಕರಣಕ್ಕಾಗಿ 40 ಲೀಟರ್ ಹಾಲು ತಂದು ಸ್ನಾನ ಮಾಡುತ್ತಿದ್ದೇನೆ ಎಂಬುದಾಗಿ ಹೇಳಿಕೊಂಡಿದದಾನೆ.
ಸ್ಥಳೀಯರ ಪ್ರಕಾರ, ದಂಪತಿಗಳು ಪರಸ್ಪರ ಕಾನೂನುಬದ್ಧವಾಗಿ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸುವ ಮೊದಲು ಅವರ ಪತ್ನಿ ಕನಿಷ್ಠ ಎರಡು ಬಾರಿ ಓಡಿಹೋಗಿದ್ದರು.
ವಿಚ್ಛೇದನ ಅಂತಿಮಗೊಂಡಿದೆ ಎಂದು ನನ್ನ ವಕೀಲರು ನಿನ್ನೆ ನನಗೆ ತಿಳಿಸಿದರು. ಆದ್ದರಿಂದ, ಇಂದು ನಾನು ನನ್ನ ಸ್ವಾತಂತ್ರ್ಯವನ್ನು ಆಚರಿಸಲು ಹಾಲಿನಲ್ಲಿ ಸ್ನಾನ ಮಾಡುತ್ತಿದ್ದೇನೆ ಎಂದು ವೈರಲ್ ವೀಡಿಯೊದಲ್ಲಿ ಹೇಳಿದ್ದಾರೆ.