ದಕ್ಷಿಣ ಕನ್ನಡ: ಜಿಲ್ಲೆಯಲ್ಲಿಯೂ    ಹೃದಯಾಘಾತ ಪ್ರಕರಣ ಹೆಚ್ಚಳ ; ಆರು ತಿಂಗಳಲ್ಲಿ 380 ಮಂದಿಗೆ ಹಾರ್ಟ್ ಅಟ್ಯಾಕ್, 85 ಸಾವು ! ಯುವಜನರಿಗಿಂತ ಪ್ರಾಯಸ್ಥರಿಗೇ ಹೆಚ್ಚು.!!

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿಯೂ ಹೃದಯಾಘಾತ ಪ್ರಕರಣ ಹೆಚ್ಚಳ ; ಆರು ತಿಂಗಳಲ್ಲಿ 380 ಮಂದಿಗೆ ಹಾರ್ಟ್ ಅಟ್ಯಾಕ್, 85 ಸಾವು ! ಯುವಜನರಿಗಿಂತ ಪ್ರಾಯಸ್ಥರಿಗೇ ಹೆಚ್ಚು.!!


ಮಂಗಳೂರು, ಜು.3 : ಹಾಸನದಲ್ಲಿ ಯುವಕ- ಯುವತಿಯರು ಹೃದಯಾಘಾತದಿಂದ ಮೃತಪಟ್ಟ ಸುದ್ದಿಗಳು ವರದಿಯಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆರೋಗ್ಯ ಇಲಾಖೆ ಎಲರ್ಟ್ ಆಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ಪ್ರಕಾರ, ದ.ಕ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳ ವರದಿ ಪ್ರಕಾರ 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಿನ ಹೃದಯಾಘಾತ ಸಾವುಗಳು ಸಂಭವಿಸಿವೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 85 ಮಂದಿ ಹೃದಯಾಘಾತಕ್ಕೀಡಾಗಿ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರ ಮಾಹಿತಿ ಪ್ರಕಾರ, ಜನವರಿಯಿಂದ ಜೂನ್ ವರೆಗೆ ಜಿಲ್ಲೆಯಲ್ಲಿ 380 ಜನರಿಗೆ ಹೃದಯಾಘಾತವಾಗಿದ್ದು, ಇದರಲ್ಲಿ 85 ಮಂದಿ ಮೃತಪಟ್ಟಿದ್ದಾರೆ. ಈ ಸಾವುಗಳಲ್ಲಿ 54 ಪುರುಷರು ಮತ್ತು 31 ಮಹಿಳೆಯರು ಸೇರಿದ್ದಾರೆ.

40 ರಿಂದ 50 ವರ್ಷದ ಒಳಗಿನ 18 ಮಂದಿ, 50 ರಿಂದ 60 ವರ್ಷ ಒಳಗಿನ 18 ಮಂದಿ ಹಾಗೂ 60 ವರ್ಷ ಮೇಲ್ಪಟ್ಟ 45 ಮಂದಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಲ್ಲಿ ತಿಳಿಸಿದ್ದಾರೆ. 20 ರಿಂದ 40 ವರ್ಷ ವಯಸ್ಸಿನ 4 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸೋಮವಾರ ಒಂದೇ ದಿನ ಹಾಸನ ಜಿಲ್ಲೆಯಲ್ಲಿ ಆರು ಹೃದಯಾಘಾತ ಪ್ರಕರಣ ವರದಿಯಾಗಿದೆ. ಸದ್ಯ ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. 40 ದಿನಗಳಲ್ಲಿ 24 ಜನರಿಗೆ ಹೃದಯಾಘಾತ ಆಗಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

Ads on article

Advertise in articles 1

advertising articles 2

Advertise under the article