ರಾಮನಗರ: 14 ವರ್ಷದ ಬಾಲಕಿ ಮೇಲೆ ಆತ್ಯಚಾರ, ದೊಣ್ಣೆಯಿಂದ ಹೊಡೆದು ಕೊಲೆ ; ಗ್ಯಾಸ್ ಸಿಲಿಂಡ‌ರ್ ಕೊಟ್ಟಿತು  ಆರೋಪಿಯ ಸುಳಿವು, ಕಾಮುಕನಿಗೆ ಬೆಂಡೆತ್ತಿದ ಪೊಲೀಸರು..!!

ರಾಮನಗರ: 14 ವರ್ಷದ ಬಾಲಕಿ ಮೇಲೆ ಆತ್ಯಚಾರ, ದೊಣ್ಣೆಯಿಂದ ಹೊಡೆದು ಕೊಲೆ ; ಗ್ಯಾಸ್ ಸಿಲಿಂಡ‌ರ್ ಕೊಟ್ಟಿತು ಆರೋಪಿಯ ಸುಳಿವು, ಕಾಮುಕನಿಗೆ ಬೆಂಡೆತ್ತಿದ ಪೊಲೀಸರು..!!

ರಾಮನಗರ ಜು.10: ಮನೆಯಲ್ಲಿ ಒಂಟಿಯಾಗಿ ಇದ್ದ 14 ವರ್ಷದ ಬಾಲಕಿಯ ಮೇಲೆ ಆತ್ಯಚಾರವೆಸಗಿ ನಂತರ ಆಕೆಯನ್ನ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ತಾವರೆಕೆರೆ ನಗರದಲ್ಲಿ ನಡೆದಿದೆ.

ಘಟನೆ ನಡೆದ ಕೆಲವೇ ತಾಸುಗಳಲ್ಲಿ ಆರೋಪಿ ಯಲ್ಲಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಯಚೂರು ಜಿಲ್ಲೆಯ 25 ವರ್ಷದ ಯಲ್ಲಪ್ಪ ಕಟ್ಟಡ ಕಾರ್ಮಿಕ. ತಾವರೆಕೆರೆಯಲ್ಲಿ ಒಬ್ಬನೇ ನೆಲೆಸಿದ್ದ ಆರೋಪಿ, ಬಾಲಕಿ ಮನೆ ಬಳಿ ಆಗಾಗ ಬಂದು ಹೋಗುತ್ತಿದ್ದ. ದಂಪತಿ ಕೆಲಸಕ್ಕೆ ಮತ್ತು ಅವರ ಮಕ್ಕಳು ಶಾಲೆಗೆ ಹೋದ ನಂತರ, ಬಾಲಕಿ ಒಬ್ಬಳೇ ಮನೆಯಲ್ಲಿರುವುದನ್ನು ಅರಿತಿದ್ದ. 

ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಬೈಕ್‌ನಲ್ಲಿ ಬಾಲಕಿ ಮನೆಗೆ ಬಂದಿದ್ದ ಆರೋಪಿ, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಬಲವಾದ ಪ್ರತಿರೋಧ ತೋರಿ ಕೂಗಿಕೊಳ್ಳಲು ಯತ್ನಿಸಿದ್ದಾಳೆ. ಆಗ ಆರೋಪಿ, ಎಲ್ಲಿ ತಾನು ಸಿಕ್ಕಿ ಬೀಳುತ್ತೆನೊ ಎಂಬ ಭಯದಿಂದ ಮನೆಯೊಳಗೆ ಇದ್ದ ದೊಣ್ಣೆಯಿಂದ ತಲೆ ಮತ್ತು ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.

ಕೃತ್ಯದ ಬಳಿಕ ಮನೆಯಿಂದ ಹಾಗೆಯೇ ಹೋದರೆ ಯಾರಿಗಾದರೂ ಅನುಮಾನ ಬರಲಿದೆ ಅಂದುಕೊಂಡು, ಒಳಗಿದ್ದ ಸಿಲಿಂಡ‌ರ್ ತೆಗೆದುಕೊಂಡು ಹೋಗಿದ್ದಾನೆ. ಮಧ್ಯಾಹ್ನ 2ರ ಸುಮಾರಿಗೆ ಬಾಲಕಿ ಸಹೋದರ ಮನೆಗೆ ಬಂದಾಗ ತನ್ನ ಅಕ್ಕ ಅರೆ ನಗ್ನಾವಸ್ಥೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದ. 

ಸುಳಿವು ಕೊಟ್ಟ ಕ್ಯಾಮೆರಾ ; 

ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಆಗ ಆರೋಪಿ ಯಲ್ಲಪ್ಪ ಬೈಕ್‌ನಲ್ಲಿ ಮನೆ ಬಳಿ ಬಂದು, ಕೆಲ ನಿಮಿಷದ ಬಳಿಕ ಅನುಮಾನಾಸ್ಪದವಾಗಿ ಸಿಲಿಂಡರ್‌ನೊಂದಿಗೆ ಹೋಗುವುದು ಗೊತ್ತಾಯಿತು. ಆತನ ಮಾಹಿತಿ ವಿವರ ಕಲೆಹಾಕಿ ರಾತ್ರಿಯೇ ಆತನನ್ನು ವಶಕ್ಕೆ ಪಡೆಯಲಾಗಿದೆ.

Ads on article

Advertise in articles 1

advertising articles 2

Advertise under the article