ಚಾಮರಾಜನಗರ :ಮಣ್ಣಿನಡಿಯಿಂದ ಹೊರಬಂದ ಮಹಿಳೆಯ ಶವದ ಮುಂಗೈ: ಇದು ಕೊಲೆಯೋ, ವಾಮಾಚಾರವೋ?

ಚಾಮರಾಜನಗರ :ಮಣ್ಣಿನಡಿಯಿಂದ ಹೊರಬಂದ ಮಹಿಳೆಯ ಶವದ ಮುಂಗೈ: ಇದು ಕೊಲೆಯೋ, ವಾಮಾಚಾರವೋ?

ಚಾಮರಾಜನಗರ: ಹೂತು ಹಾಕಿದ್ದ ಶವದ ಮುಂಗೈ ಹೊರಬಂದ ಘಟನೆ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದಲ್ಲಿ ಗುರುವಾರ ನಡೆದಿದೆ. ಮೃತಪಟ್ಟವರು ಮಹಿಳೆಯಾಗಿದ್ದು, 35ರಿಂದ 40 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಶವವನ್ನು ಹೊರತೆಗೆದು ಸಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಹಳೇ ಹಂಪಾಪುರದ ಸುವರ್ಣಾವತಿ ಹೊಳೆ ದಂಡೆಯಲ್ಲಿ ಈ ಶವವನ್ನು ಹೂತು ಹಾಕಲಾಗಿದೆ. ಶಶಿಕುಮಾರ್ ಎಂಬವರು ಕುರಿ ಕಾಯುತ್ತಿದ್ದಾಗ ಮಣ್ಣಿನಿಂದ ಹೊರಬಂದ ಮುಂಗೈಯನ್ನು ಗಮನಿಸಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ ಸ್ಥಳಕ್ಕೆ ಭೇಟಿ ನೀಡಿ, ಶವ ಹೊರತೆಗೆಸಿ ಮುಂದಿನ ತನಿಖೆಗೆ ಸೂಚಿಸಿದ್ದಾರೆ.

ವಾಮಾಚಾರವೋ?, ಕೊಲೆಯೊ?: ಶವ ಹೂತು ಹಾಕಲಾಗಿದ್ದ 30-40 ಅಡಿ ದೂರದಲ್ಲಿ ದೀಪ, ನೀರಿನ ಬಾಟಲಿ, ಅರಿಶಿಣ-ಕುಂಕುಮ ಚೆಲ್ಲಾಡಿದ್ದು, ವಾಮಾಚಾರದ ಶಂಕೆ ಮೂಡಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article