
ಫ್ಲೋರಿಡಾ :ತರಗತಿಯಲ್ಲೇ ವಿದ್ಯಾರ್ಥಿ ಜತೆ ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕಿ ಅರೆಸ್ಟ್..!!

ಫ್ಲೋರಿಡಾ: ತರಗತಿಯಲ್ಲೇ ಅಪ್ರಾಪ್ತ ವಿದ್ಯಾರ್ಥಿ ಜತೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಪ್ರೌಢಶಾಲಾ ಶಿಕ್ಷಕಿಯೊಬ್ಬಳನ್ನು ಬಂಧಿಸಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
ಬಂಧಿತಳನ್ನು ಫ್ಲೋರಿಡಾದ ರಿವರ್‌ವ್ಯೂ ಪ್ರೌಢಶಾಲೆಯ ಶಿಕ್ಷಕಿ ಬ್ರೂಕ್ ಆಂಡರ್ಸನ್ (27) ಎಂದು ಗುರುತಿಸಲಾಗಿದೆ. ಶಿಕ್ಷಕಿ, ವಿದ್ಯಾರ್ಥಿಯ ಜತೆ ಅನೇಕ ತಿಂಗಳುಗಳಿಂದ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ತರಗತಿಗಳು ಪ್ರಾರಂಭವಾಗುವ ಮೊದಲು ಶಿಕ್ಷಕಿ, ವಿದ್ಯಾರ್ಥಿಯನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದಳು. ಕಳೆದ ಸೆಪ್ಟೆಂಬರ್‌ನಿಂದ ಶಿಕ್ಷಕಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು ಎಂದು ವಿದ್ಯಾರ್ಥಿ ಒಪ್ಪಿಕೊಂಡಿರುವುದಾಗಿ ಪೊಲೀಸರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶಿಕ್ಷಕಿ ಬ್ರೂಕ್ ಆಂಡರ್ಸನ್ಳನ್ನು ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ರಿವರ್‌ವ್ಯೂ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ಬಂಧನದ ನಂತರ ಶಾಲಾ ಡೈರೆಕ್ಟರಿಯಿಂದ ಆಕೆಯ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಘಟನೆಯ ತನಿಖೆ ಮುಂದುವರೆದಿದೆ ಮತ್ತು ಹೆಚ್ಚಿನ ಸಂತ್ರಸ್ತರಿದ್ದರೆ, ಮುಂದೆ ಬಂದು ಹೇಳಿಕೆ ನೀಡಲು ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.