ಛತ್ತಿಸ್ ಗಡ :ಪೊಲೀಸ್ ವಾಹನದ ಬಾನೆಟ್ ಮೇಲೆ ಬರ್ತ್ ಡೇ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ.
Thursday, June 19, 2025
ಛತ್ತೀಸ್ಗಢ: ಪೊಲೀಸ್ ವಾಹನದ ಬಾನೆಟ್ ಮೇಲೆ ಪೊಲೀಸ್ ಅಧಿಕಾರಿ ಪತ್ನಿಯೊಬ್ಬರು ಬರ್ತ್ ಡೇ ಕೇಕ್ ಕತ್ತರಿಸಿರುವ ವಿಡಿಯೋ ವೈರಲ್ ಆಗಿದೆ.
ಈ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಬಲರಾಂಪುರ-ರಾಮಾನುಜ್‌ಗಂಜ್‌ನ 12 ನೇ ಬೆಟಾಲಿಯನ್‌ನ ಡಿಎಸ್‌ಪಿ ತಸ್ಲೀಮ್ ಆರಿಫ್ ಅವರ ಪತ್ನಿ ಫರ್ಹೀನ್ ಖಾನ್ ಸ್ನೇಹಿತರೊಂದಿಗೆ ಪೊಲೀಸ್ ಜೀಪ್ನಲ್ಲಿ ಪ್ರಯಾಣಿಸಿದ್ದಷ್ಟೇ ಅಲ್ಲದೆ ಬಾನೆಟ್ ಮೇಲೆ ಕುಳಿತು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆಕೆ ಕೇಕ್ ಕತ್ತರಿಸುವಾಗ ಡ್ರೈವರ್ ಸೀಟ್ನಲ್ಲಿ ಓರ್ವ ಮಹಿಳೆ ಇದ್ದಾರೆ.
ಸನ್ರೂಫ್, ಡಿಕ್ಕಿ ಸೇರಿ ಮೂರ್ನಾಲ್ಕುಮಹಿಳೆಯರು ಆ ವಾಹನದಲ್ಲಿರುವುದು ಕಾಣಬಹುದು. ಸರ್ಕಾರಿ ಆಸ್ತಿಯ ದುರುಪಯೋಗ ಮತ್ತು ಸಂಚಾರ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆ ಸ್ಪಷ್ಟವಾಗಿದ್ದರೂ, ಪೊಲೀಸರು ಡಿಎಸ್ಪಿ ಆರಿಫ್ ಅಥವಾ ಅವರ ಪತ್ನಿ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಬದಲಾಗಿ ವಾಹನದ ಚಾಲಕರ ವಿರುದ್ಧ ಎಫ್ಐರ್ ದಾಖಲಿಸಲಾಗಿದೆ.