ಮಹಾರಾಷ್ಟ್ರ: NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೋಲಿನಿಂದ ಹಲ್ಲೆ ಮಾಡಿ ಮಗಳನ್ನ ಫಿನಿಷ್ ಮಾಡಿದ ಪ್ರಾಂಶುಪಾಲ ಅಪ್ಪ...!!!
ಮಹಾರಾಷ್ಟ್ರ : ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ನಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಕೋಪಗೊಂಡ ತಂದೆ ಮಗಳನ್ನ ಹಿಗ್ಗಾಮುಗ್ಗಾ ತಳಿಸಿ ಕೊಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.
ಮೃತಳ ತಂದೆ ಧೋಂಡಿರಾಮ್ ಭೋಸಲೆಯನ್ನ ಪೊಲೀಸರು ಬಂಧಿಸಿದ್ದು, ಆರೋಪಿ ಶಾಲೆಯ ಪ್ರಾಂಶುಪಾಲನಾಗಿ ಕೆಲಸ ಮಾಡುತ್ತಿದ್ದ ಎಂಬುದು ಗಮನಾರ್ಹ .
ತಂದೆ ಕೋಪದಲ್ಲಿ ಮಗಳ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗಳನ್ನು ಬಿಟ್ಟು ಯೋಗ ದಿನದ ಕಾರ್ಯಕ್ರಮಕ್ಕೆ ಹೋಗಿದ್ದು, ಬಾಲಕಿ ತೀವ್ರ ರಕ್ತಸ್ರಾವದಿಂದ ಅಲ್ಲಿಯೇ ಸಾವನ್ನಪ್ಪಿದ್ದಾಳೆ.
ಕಡಿಮೆ ಅಂಕಕ್ಕಾಗಿ ಕ್ರೂರ ದಾಳಿ.!
ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದರಿಂದ ಮಗಳಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟ್ ಸಿಗಲಿಲ್ಲ. ಇದರಿಂದಾಗಿ ತಂದೆ ಧೋಂಡಿರಾಮ್ ತುಂಬಾ ಕೋಪಗೊಂಡಿದ್ದ. ತನ್ನ ಮಗಳನ್ನು ಕೋಲಿನಿಂದ ತೀವ್ರವಾಗಿ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ತನ್ನ ಶಾಲೆಯಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾನೆ. ಆತ ಮನೆಗೆ ಹಿಂದಿರುಗಿದಾಗ, ತನ್ನ ಮಗಳು ಪ್ರಜ್ಞಾಹೀನಳಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನ ಕಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಬಾಲಕಿ ಈಗಾಗಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ದೃಢಪಡಿಸಿದರು.
ಪೊಲೀಸರು ಧೋಂಡಿರಾಮ್ ಭೋಸಲೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.