ನವದೆಹಲಿ: NCRB REPORT; ಭಾರತದಲ್ಲಿ ಪ್ರೇಮವೈಫಲ್ಯಕ್ಕೆ ಯುವಕರೇ ಹೆಚ್ಚು ಬಲಿ!

ನವದೆಹಲಿ: NCRB REPORT; ಭಾರತದಲ್ಲಿ ಪ್ರೇಮವೈಫಲ್ಯಕ್ಕೆ ಯುವಕರೇ ಹೆಚ್ಚು ಬಲಿ!

ನವದೆಹಲಿ : ಭಾರತದಲ್ಲಿ ದಿನಕ್ಕೆ 10ಕ್ಕೂ ಹೆಚ್ಚು ಯುವಕರು ಒಂದಲ್ಲ ಒಂದು ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ. ಇದೀಗ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಸರ್ವೇಯೊಂದನ್ನು ಮಾಡಿದ್ದು, ಭಾರತದಲ್ಲಿ ಯುವಕರ ಸಾವಿಗೆ ಆತ್ಮಹತ್ಯೆಯೇ ಕಾರಣ ಎಂಬ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿಯ ಪ್ರಕಾರ, ದೇಶದಲ್ಲಿ ಸುಮಾರು 18 ರಿಂದ 30 ವರ್ಷದ ಯುವಕರು ಅಪಘಾತ ಬಿಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಹೆಚ್ಚು ಜನ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.

ದೇಶದಲ್ಲಿ ಶೇ 50 ರಷ್ಟು ಜನ ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಿದ್ದರೆ, ಇನ್ನುಳಿದ ಶೇ.50 ರಲ್ಲಿ 48 ಪ್ರತಿಶತದಷ್ಟು ಜನ ಕೌಟುಂಬಿಕ ಕಲಹಗಳು, ಪ್ರೇಮ ವ್ಯವಹಾರಗಳು ಮತ್ತು ವಿವಾಹ ಸಂಬಂಧಿತ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿ ಮಾಡಿದೆ.

ದೇಶದಲ್ಲಿ ಶೇ. 32.4 ದಷ್ಟು ಯುವಕರು ಮನೆಯಲ್ಲಿನ ಆಂತರಿಕ ಕಲಹಗಳಿಂದ ಆತ್ಮಹತ್ಯೆ ಮಾಡಿಕೊಂಡರೆ, ಶೇ.8 ರಷ್ಟು ಯುವಕರು ಪ್ರೇಮ ಸಂಬಂಧದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನುಳಿದ ಶೇ7.5 ರಷ್ಟು ಯುವಕರು ಮದುವೆ ಸಂಬಂಧಿತ ಸಮಸ್ಯೆಗಳಿಂದಾಗಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು NCRB ತಿಳಿಸಿದೆ.

Ads on article

Advertise in articles 1

advertising articles 2

Advertise under the article