
ಬೆಂಗಳೂರು: IPL 2025 Final ಈ ಸಲ ಕಪ್ ನಮ್ದೇ…. ಆರ್ ಸಿಬಿಯ 18 ವರ್ಷಗಳ ಕನಸು ನನಸು ; ಪಂಜಾಬ್ ಕಿಂಗ್ಸ್ ವಿರುದ್ದ ಆರ್ ಸಿಬಿ ಗೆ ರೋಚಕ ಜಯ.!!!
Tuesday, June 3, 2025

ಬೆಂಗಳೂರು :ಈ ಸಲ ಕಪ್ ನಮ್ದೇ… ಕಳೆದ ಹದಿನೆಂಟು ವರ್ಷಗಳಿಂದ ಕೇಳಿ ಬರುತ್ತಿರುವ ಆರ್‌ಸಿಬಿ ಅಭಿಮಾನಿಗಳು ಬಹು ದೊಡ್ಡ ಕೂಗು ಇದು ನನಸಗಾಗಿದೆ.
ಐಪಿಎಲ್-2025 ಟ್ರೋಫಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಗೂ ಮುತ್ತಿಟ್ಟಿದೆ. ಅಹ್ಮದಾಬಾದ್ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲ್ಲುವ ಮೂಲಕ ಪಾಟೀದಾರ್ ನಾಯಕತ್ವದ ಆರ್ಸಿಬಿ, ಕಪ್ ಗೆದ್ದುಕೊಂಡಿದೆ. ಸತತ 18 ವರ್ಷಗಳ ಕಾಯುವಿಕೆಯ ನಂತರ ಆರ್ಸಿಬಿ ಚೊಚ್ಚಲ ಟ್ರೋಫಿಯನ್ನ ತನ್ನದಾಗಿಸಿಕೊಂಡಿದೆ.
35 ಬಾಲ್ ಎದುರಿಸಿದ ವಿರಾಟ್ 43 ರನ್ಗಳಿಸಿ ಒಮರ್ ಜಾಯ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಲಿಯಾಮ್ ಲಿವಿಂಗ್ಸ್ಟೋನ್ 2 ಸಿಕ್ಸರ್ನೊಂದಿಗೆ 25 ರನ್ಗಳ ಕಾಣಿಕೆ ನೀಡಿದರು. ಉಪನಾಯಕ 240 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬಿಸಿ 10 ಬಾಲ್ನಲ್ಲಿ 24 ರನ್ಗಳ ಕಾಣಿಕೆ ನೀಡಿದರು. ಶೆಫಾರ್ಡ್ 17 ರನ್ಗಳಿಸಿ ಔಟ್ ಆದರೆ, ಕೃನಾಲ್ ಪಾಂಡ್ಯ 4 ರನ್ಗಳಿಸಿ ಔಟ್ಆ ದರು.