ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ದಿಢೀರ್ ವರ್ಗ ; ಯುವ ಐಎಎಸ್ ಅಧಿಕಾರಿ ದರ್ಶನ್ ಎಚ್.ವಿ ನೇಮಕ.

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ದಿಢೀರ್ ವರ್ಗ ; ಯುವ ಐಎಎಸ್ ಅಧಿಕಾರಿ ದರ್ಶನ್ ಎಚ್.ವಿ ನೇಮಕ.

ಮಂಗಳೂರು: ರಾಜ್ಯದಲ್ಲಿ 16 ಮಂದಿ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಎರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಗಿಲನ್ ಅವರನ್ನು ದಿಢೀರ್ ಆಗಿ ವರ್ಗಾಯಿಸಿದ್ದು, ಬೆಂಗಳೂರಿನಲ್ಲಿ ನೋಂದಣಿ ಇಲಾಖೆಯ ಐಜಿ ಮತ್ತು ಸ್ಟಾಂಪ್ಸ್ ವಿಭಾಗದ ಕಮಿಷನರ್ ಆಗಿ ಹೊಸ ಹುದ್ದೆ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ 2016ನೇ ಸಾಲಿನ ಐಎಎಸ್ ಅಧಿಕಾರಿ ದರ್ಶನ್ ಎಚ್.ವಿ ಅವರನ್ನು ನೇಮಕ ಮಾಡಲಾಗಿದೆ. ಅವರು ಬೆಂಗಳೂರಿನಲ್ಲಿ ಕಮರ್ಶಿಯಲ್ ಟ್ಯಾಕ್ಸ್ ವಿಭಾಗದ ಎಡಿಷನಲ್ ಕಮಿಷನರ್ ಹುದ್ದೆಯಲ್ಲಿದ್ದರು. ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಅವರನ್ನೂ ವರ್ಗಾವಣೆ ಮಾಡಲಾಗಿದ್ದು, ಶಿಕ್ಷಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರಾಗಿ ಹುದ್ದೆ ನೀಡಲಾಗಿದೆ.

2023ರ ಜನವರಿಯಲ್ಲಿ ಮುಲ್ಲೈ ಮುಗಿಲನ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಎರಡೂವರೆ ವರ್ಷ ಕಾಲ ಮುಗಿಲನ್ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗೆ ಕಾನೂನು ಸುವ್ಯವಸ್ಥೆ ನೆಪವೊಡ್ಡಿ ಎಸ್ಪಿ ಮತ್ತು ಪೊಲೀಸ್ ಕಮಿಷನರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಪ್ರವಾಸದಲ್ಲಿದ್ದ ಮುಗಿಲನ್ ಯಾಕೆ ವರ್ಗಾವಣೆ ಆಗಿಲ್ಲ ಎಂಬ ಪ್ರಶ್ನೆ ಬಂದಿತ್ತು.

Ads on article

Advertise in articles 1

advertising articles 2

Advertise under the article