ಚೀನಾ :ಕತ್ತೆಗಳಿಗೆ ಈಗ ಭಾರೀ ಡಿಮ್ಯಾಂಡ್… ಲಕ್ಷ ಲಕ್ಷ ಬೆಲೆ!

ಚೀನಾ :ಯಾವುದೇ ವಸ್ತುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ರವಾನೆ ಮಾಡಲು ಈ ಕತ್ತೆಗಳನ್ನೇ ಪ್ರಮುಖವಾಗಿ ಬಳಕೆ ಮಾಡಲಾಗುತ್ತಿದೆ. ಆದರೆ ಪಾಕಿಸ್ತಾನದಲ್ಲಿ ಕತ್ತೆಗಳಿಗೆ ಸಖತ್ ಡಿಮ್ಯಾಂಡ್ ಇದೆ.
ಪಾಕಿಸ್ತಾನದಲ್ಲಿ ಈಗಲೂ ಕತ್ತೆಗಳೇ ಹೆಚ್ಚು ಉಪಯುಕ್ತವಾದ ಪ್ರಾಣಿಯಾಗಿದೆ. ಪಾಕಿಸ್ತಾನದಲ್ಲಿ ಕತ್ತೆಗಳು ಹಲವಾರು ಕೈಗಾರಿಕೆಗಳ ಅವಿಭಾಜ್ಯ ಅಂಗವಾಗಿದೆ. ಜೊತೆಗೆ ದೇಶದಲ್ಲಿರುವ ಬಡ ಕೂಲಿ ಕಾರ್ಮಿಕರು ಭಾರವಾದ ವಸ್ತುಗಳನ್ನು ಸಾಗಾಟ ಮಾಡಲು, ಅವುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಕತ್ತೆ ಬಂಡಿಗಳನ್ನೇ ಹೆಚ್ಚಾಗಿ ಅವಲಂಭಿಸಿದ್ದಾರೆ. ಆದರೆ ಚೀನಾದಿಂದ ಪಾಕ್ ಕತ್ತೆಗಳಿಗೆ ಬೇಡಿಕೆ ಶುರುವಾಗಿದ್ದರಿಂದ ಒಂದು ಕತ್ತೆ ಬೆಲೆ 3 ಲಕ್ಷ ರೂಪಾಯಿ ಎನ್ನಲಾಗುತ್ತಿದೆ.
ಚೀನಾದ ಎಜಿಯಾವೊ ಉದ್ಯಮ ದಲ್ಲಿ ಕತ್ತೆಗಳ ಚರ್ಮವನ್ನು ಅಧಿಕವಾಗಿ ಬಳಕೆ ಮಾಡುತ್ತಿದ್ದರಿಂದ ದರ ಏರಿಕೆ ಆಗಿದೆ. ಪಾಕಿಸ್ತಾನದ ಕತ್ತೆಗಳಿಗೆ ಚೀನಾದಲ್ಲಿ ಬಹುಬೇಡಿಕೆ ಇದೆ. ಬಹುತೇಕ ಕತ್ತೆಗಳನ್ನು ಚೀನಾ ಖರೀದಿ ಮಾಡ್ತಿದೆ. ಕತ್ತೆಗಳನ್ನು ಔಷಧಿಗೆ ಬಳಸಿಕೊಳ್ತಿದೆ . ಪಾಕ್ ನಿಂದ ಕತ್ತೆ ಖರೀದಿ ಮಾಡಿ, ಅದ್ರ ಚರ್ಮದಿಂದ ಔಷಧಿ ತಯಾರಿಸುತ್ತದೆ. ಚರ್ಮದಿಂದ ಎಜಿಯಾವೊ ಎಂಬ ವಿಶೇಷ ರೀತಿಯ ಔಷಧವನ್ನು ತಯಾರಿಸುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಇದನ್ನು ರೋಗನಿರೋಧಕ ಶಕ್ತಿ ಹೆಚ್ಚಿಸಲು, ರಕ್ತಹೀನತೆ ಸಮಸ್ಯೆಗೆ ಪರಿಹಾರವಾಗಿ ಬಳಸಲಾಗುತ್ತದೆ. ಇದೇ ಕಾರಣಕ್ಕೆ ಚೀನಾ ಅವುಗಳನ್ನು ಪಾಕಿಸ್ತಾನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದೆ.ಈಗಲೂ ಸಾಂಪ್ರದಾಯಿಕ ಚೀನೀ ಔಷಧ ಅಂಗಡಿಗಳಲ್ಲಿ ಜೆಲಾಟಿನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ.