ಮಂಗಳೂರು :ಬಿಜೈ ಮಸಾಜ್ ಪಾರ್ಲರಿನಲ್ಲಿ ಅಕ್ರಮ ಚಟುವಟಿಕೆ ; ದಾಳಿ ನಡೆಸಿ ಟ್ರೇಡ್ ಲೈಸನ್ಸ್ ರದ್ದುಪಡಿಸಿದ ಪೊಲೀಸರು, ಇಬ್ಬರು ಯುವತಿಯರ ರಕ್ಷಣೆ.!
ಮಂಗಳೂರು : ನಗರದ ಬಿಜೈ ಬಳಿಯ ಮಸಾಜ್ ಪಾರ್ಲರ್ ಕಂ ಬ್ಯೂಟಿ ಪಾರ್ಲರ್ ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದ ಮೇರೆಗೆ ಉರ್ವಾ ಪೊಲೀಸರು ದಾಳಿ ನಡೆಸಿದ್ದು, ಅಕ್ರಮ ಕಂಡುಬಂದ ಕಾರಣ ಮಹಾನಗರ ಪಾಲಿಕೆ ಮೂಲಕ ಕೇಂದ್ರದ ಲೈಸನ್ಸ್ ರದ್ದುಪಡಿಸಿದ್ದಾರೆ.
ಬಿಜೈನ ಪಿಂಟೋ ಚೇಂಬರಿನ ಎರಡನೇ ಮಹಡಿಯಲ್ಲಿ ಸಿಸ್ತ್ ಸೆನ್ಸ್ ಬ್ಯೂಟಿ ಸೆಲೂನ್ ಹೆಸರಲ್ಲಿ ಮಸಾಜ್ ಪಾರ್ಲರ್ ನಡೆಸಲಾಗುತ್ತಿತ್ತು. ಉಡಪಿ ಬ್ರಹ್ಮಗಿರಿಯ ಸುದರ್ಶನ್ ಎಂಬವರು ಮಸಾಜ್ ಪಾರ್ಲರ್ ನಡೆಸುತ್ತಿದ್ದರು. ಪೊಲೀಸರು ಈ ಬಗ್ಗೆ ಅಕ್ರಮ ಚಟುವಟಿಕೆ ಸಂಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಪಾರ್ಲರ್ ನಲ್ಲಿ ಈಶಾನ್ಯ ರಾಜ್ಯಗಳ ಯುವತಿಯರನ್ನು ಮುಂದಿಟ್ಟು ಅಕ್ರಮ ಚಟುವಟಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಪೊಲೀಸರು ಇಬ್ವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಇದಲ್ಲದೆ, ಮಸಾಜ್ ಪಾರ್ಲರಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ನೀಡಲಾಗಿರುವ ಟ್ರೇಡ್ ಲೈಸನ್ಸ್ ಅನ್ನು ರದ್ದುಪಡಿಸುವಂತೆ ಆಯುಕ್ತರಿಗೆ ಶಿಫಾರಸು ಮಾಡಲಾಗಿತ್ತು. ಇದರಂತೆ, ಪಾಲಿಕೆ ಆಯುಕ್ತರು ಕೇಂದ್ರದ ಟ್ರೇಡ್ ಲೈಸನ್ಸ್ ಅನ್ನು ರದ್ದುಪಡಿಸಿದ್ದಾರೆ. ಅಕ್ರಮ ಚಟುವಟಿಕೆ ಸಂಬಂಧಿಸಿ ದಾಳಿ ಮುಂದುವರಿಯಲಿದ್ದು, ಅಂತಹ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.