ಬೆಂಗಳೂರು :ಕಾಲ್ತುಳಿತ ಪ್ರಕರಣ – ಅಮಿಕಸ್ ಕ್ಯೂರಿ ನೇಮಕ ಮಾಡಿದ ಹೈಕೋರ್ಟ್..!!
Monday, June 23, 2025

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿರುವ ಹೈಕೋರ್ಟ್ ವಿಭಾಗೀಯ ಪೀಠ ಇಂದು ಅರ್ಜಿ ವಿಚಾರಣೆ ನಡೆಸಿ,ಅಮೈಕಸ್ ಕ್ಯೂರಿಯನ್ನು ನೇಮಕ ಮಾಡಿದೆ.
ಅಮಿಕಸ್ ಕ್ಯೂರಿ ಎಂದರೆ “ನ್ಯಾಯಾಲಯದ ಸ್ನೇಹಿತ” ಎಂದರ್ಥ. ಅಮಿಕಸ್ ಕ್ಯೂರಿ ಸಾಮಾನ್ಯವಾಗಿ ಕಾನೂನು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರದ ವ್ಯಕ್ತಿ ಅಥವಾ ಗುಂಪಾಗಿರುತ್ತದೆ. ಆದರೆ ನ್ಯಾಯಾಲಯಕ್ಕೆ ವಿಷಯದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಅಥವಾ ದೃಷ್ಟಿಕೋನವನ್ನು ಒದಗಿಸುವ ಮೂಲಕ ಸಹಾಯ ಮಾಡಲು ಅನುಮತಿ ಕೇಳುತ್ತದೆ. ಉದಾಹರಣೆಗೆ, ಇದು ಕಾನೂನಿನ ಬಗ್ಗೆ ಪರಿಣತಿಯನ್ನು ಹೊಂದಿರುವ ವ್ಯಕ್ತಿಯಾಗಿರಬಹುದು, ಅಥವಾ ಸಾರ್ವಜನಿಕ ಹಿತಾಸಕ್ತಿಯ ವಿಷಯದ ಬಗ್ಗೆ ತಿಳಿದಿರುವ ಗುಂಪಾಗಿರಬಹುದು.
ಪಿಐ ಎಲ್ ಹಾಗೂ ಪ್ರಕರಣದ ಇತರೆ ದಾಖಲೆಗಳನ್ನು ಎಸ್.ಸುಶೀಲಾ ಅವರಿಗೆ ನೀಡಲು ನ್ಯಾಯಪೀಠ ಸೂಚಿಸಿದೆ. ಪ್ರಕರಣದ ಅರ್ಜಿ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.