ಕಾರವಾರ :ಹಲ್ಲೆ ಪ್ರಕರಣ ; ಅನಂತ್ ಕುಮಾರ್ ಹೆಗಡೆ ಗನ್ ಮ್ಯಾನ್ ಅಮಾನತು, ಹತ್ತು ಮಂದಿ ಡಿಆರ್ ಸಿಬಂದಿಗೆ ವರ್ಗಾವಣೆ..!!

ಕಾರವಾರ :ಹಲ್ಲೆ ಪ್ರಕರಣ ; ಅನಂತ್ ಕುಮಾರ್ ಹೆಗಡೆ ಗನ್ ಮ್ಯಾನ್ ಅಮಾನತು, ಹತ್ತು ಮಂದಿ ಡಿಆರ್ ಸಿಬಂದಿಗೆ ವರ್ಗಾವಣೆ..!!

ಕಾರವಾರ, ಜೂನ್ 25 : ನೆಲಮಂಗಲ ರೋಡ್ ರೇಜ್ ಪ್ರಕರಣದಲ್ಲಿ ಆರೋಪಕ್ಕೀಡಾದ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್‌ಮ್ಯಾನ್ ಶ್ರೀಧರ್‌ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಆದೇಶ ಹೊರಡಿಸಿದ್ದಾರೆ.

ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್‌ಮ್ಯಾನ್ ಆಗಿ ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಶ್ರೀಧರ್ ನೆಲಮಂಗಲದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬಂಧನ ವಿರುದ್ಧ ಜಾಮೀನು ಪಡೆದಿದ್ದರು. ಕಾರೊಂದು ಓವರ್ ಟೇಕ್ ಮಾಡಿಕೊಂಡು ಹೋಯ್ತು ಅಂತ ಅದನ್ನು ನಿಲ್ಲಿಸಿ ಚಾಲಕ ಮತ್ತು ಅದರಲ್ಲಿದ್ದವರಿಗೆ ಹಲ್ಲೆ ಮಾಡಲಾಗಿತ್ತು ಎಂದು ದಾಬಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಇದರ ಬೆನ್ನಲ್ಲೇ ಡಿ.ಆರ್ ಪೊಲೀಸ್ ವಿಭಾಗದಲ್ಲಿ ಗಣ್ಯ ವ್ಯಕ್ತಿಗಳಿಗೆ ಗನ್‌ಮ್ಯಾನ್ ಆಗಿ ಐದು ವರ್ಷಕ್ಕಿಂತ ಹೆಚ್ಚು ಸೇವೆ ಮಾಡುತ್ತಿರುವ ಪೊಲೀಸ್ ಸಿಬಂದಿಗಳಿಗೆ ವರ್ಗಾವಣೆ ಆದೇಶ ಮಾಡಲಾಗಿದೆ. ಹತ್ತು ಜನ ಗನ್‌ಮ್ಯಾನ್‌ಗಳಿಗೆ ಬೇರೆ ಕಡೆ ವರ್ಗಾವಣೆಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಆದೇಶಿಸಿದ್ದಾರೆ.

Ads on article

Advertise in articles 1

advertising articles 2

Advertise under the article