ಚೆನ್ನೈ :30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲಿ ಪತ್ತೆ ; ಬೆಚ್ಚಿಬಿದ್ದ ಮೀನುಗಾರರು, ಇದು ಡೂಮ್ಸ್ ಡೇ ಫಿಶ್, ಜಪಾನ್ ಜನಪದ ಹೇಳುತ್ತೆ ವಿಕೋಪ ಮುನ್ಸೂಚನೆ ! god fish reson

ಚೆನ್ನೈ :30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲಿ ಪತ್ತೆ ; ಬೆಚ್ಚಿಬಿದ್ದ ಮೀನುಗಾರರು, ಇದು ಡೂಮ್ಸ್ ಡೇ ಫಿಶ್, ಜಪಾನ್ ಜನಪದ ಹೇಳುತ್ತೆ ವಿಕೋಪ ಮುನ್ಸೂಚನೆ ! god fish reson

ಚೆನ್ನೈ, ಜೂ.4  ಭೂಕಂಪ ಮಾದರಿಯ ಪ್ರಕೃತಿ ವಿಕೋಪ ಸಂಭವಿಸುತ್ತದೆ ಎಂಬ ಸೂಚನೆ ಎಂಬ ನಂಬಿಕೆಯಿದೆ. ಜಪಾನ್ ಜನರು, ದೇವರೇ ಮೀನಿನ ರೂಪದಲ್ಲಿ ಬಂದು ನಮಗೆ ಎಚ್ಚರಿಕೆ ನೀಡುತ್ತಾನೆ ಎಂದು ನಂಬಿದ್ದಾರೆ. ಹೊಳೆಯುವ ಮೀನಿನಂತೆ ಕಂಡರೂ ಉದ್ದಕ್ಕಿರುವುದರಿಂದ ಹಾವಿನಂತೆ ಕಾಣುತ್ತದೆ. ಜಪಾನ್ ದೇಶದ ಜನಪದ ಕತೆಗಳಲ್ಲಿ 'Ryugu No Sukai ' (ಸಮುದ್ರ ದೇವನ ದೂತ) ಎಂಬ ಅರ್ಥವಿದ್ದು ಮನುಷ್ಯನಿಗೆ ಎಚ್ಚರಿಕೆ ನೀಡುವುದಕ್ಕಾಗಿ ಕಾಣಿಸಿಕೊಳ್ಳುವುದಂತೆ. ತಮಿಳುನಾಡು ಕರಾವಳಿಯಲ್ಲಿ  ಮೇ 30ರಂದು ಈ ಮೀನು ಪತ್ತೆಯಾಗಿದ್ದು, ಜಾಲತಾಣಗಳಲ್ಲಿ ವಿಡಿಯೋ ಹರಿದಾಡಿವೆ. 

ಜಪಾನ್ ನಂಬಿಕೆಯಂತೆ, 2011ರಲ್ಲಿ ತೊಹೊಕು ಭೂಕಂಪಕ್ಕೂ ಮುನ್ನ 20 ಈ ರೀತಿಯ ಮೀನುಗಳು ಕಾಣಸಿಕ್ಕಿದೆಯಂತೆ. ಫಿಲಿಪೈನ್ಸ್ ನಲ್ಲಿ 2017 ರಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದಾಗಲೂ ಈ ಮೀನುಗಳು ಮೇಲೆ ಬಂದಿದ್ದುವಂತೆ. ಮೆಕ್ಸಿಕೋದಲ್ಲಿಯೂ ಭೂಕಂಪ, ಸುನಾಮಿ ಸಂಭವಿಸಿದಾಗ ಈ ಮೀನು ಕಾಣಸಿಕ್ಕಿದ್ದರಿಂದ ಇದು ಪ್ರಕೃತಿ ವಿಕೋಪದ ಮುನ್ಸೂಚನೆ ಎನ್ನುವ ನಂಬಿಕೆಯನ್ನು ಗಟ್ಟಿಗೊಳಿಸಿದೆ. ಆದರೆ 2019ರಲ್ಲಿ ಅಮೆರಿಕದ ಭೂಕಂಪ ತಜ್ಞರು ಈ ಬಗ್ಗೆ ಹಿಂದಿನೆಲ್ಲ ಪ್ರಾಕೃತಿಕ ವಿಕೋಪಗಳನ್ನು ವಿಶ್ಲೇಷಿಸಿ ಮಾಡಿದ ವರದಿಯಲ್ಲಿ ಓರ್ ಫಿಶ್ ಅನಾಹುತ ಮುನ್ಸೂಚಕ ಮೀನು ಎನ್ನುವ ವಾದವನ್ನು ನಿರಾಕರಿಸಿದ್ದಾರೆ. 

ಓರ್ಫಿಶ್ ಸಾಮಾನ್ಯವಾಗಿ ಸಮುದ್ರದ ಆಳದಲ್ಲಿ ಅಂದರೆ, ಸುಮಾರು 700 ರಿಂದ 3,280 ಅಡಿಯಲ್ಲಿ ಜೀವಿಸುತ್ತವೆ. ಆದ್ದರಿಂದ, ಮೇಲ್ಮೈನಲ್ಲಿ ಈ ಜೀವಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಮೀನುಗಳ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅಥವಾ ಏನಾದರೂ ಸಮಸ್ಯೆ ಆದಾಗ ಮಾತ್ರ ಹೊರಗಡೆ ಬರುತ್ತವೆ ಎಂದು ತಜ್ಞರು ಹೇಳುತ್ತಾರೆ. ‌ಇದೇ ವೇಳೆ ಸಮುದ್ರದ ಅಡಿಯಲ್ಲಿ ಆಗುವಂತಹ ಬದಲಾವಣೆ, ಅದರಿಂದ ಉಂಟಾಗುವ ಒತ್ತಡಗಳಿಂದಾಗಿ ಈ ಮೀನುಗಳು ಮೇಲ್ಮೈಗೆ ಬರುತ್ತವೆ, ಸಮುದ್ರ ತಳದಲ್ಲಾಗುವ ಪರಿಚಲನೆಗಳು ಭೂಮಿಯಲ್ಲಾಗುವ ವಿಕೋಪಗಳಿಗೆ ಸಂಬಂಧವನ್ನು ಹೊಂದಿರುತ್ತವೆ, ಹೀಗಾಗಿ ಇದು ವಿಕೋಪ ಸೂಚಕ ಎನ್ನುವುದನ್ನು ನಿರಾಕರಿಸಲಾಗದು ಎಂಬ ವಾದವನ್ನೂ ಕೆಲವರು ಮುಂದಿಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article