ಸಿಕ್ಕಿಂ: ಸೇನಾ ಶಿಬಿರದಲ್ಲಿ ಭೂಕುಸಿತ; 3 ಮಂದಿ ಸಾವು, 9 ಜನರು ನಾಪತ್ತೆ..

ಸಿಕ್ಕಿಂ: ಸೇನಾ ಶಿಬಿರದಲ್ಲಿ ಭೂಕುಸಿತ; 3 ಮಂದಿ ಸಾವು, 9 ಜನರು ನಾಪತ್ತೆ..

ಉತ್ತರ ಸಿಕ್ಕಿಂ:ಛಾಟೆನ್‌ನಲ್ಲಿರುವ ಸೇನಾ ಶಿಬಿರದಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತದಲ್ಲಿ , 3 ಜನರು ಸಾವನ್ನಪ್ಪಿದ್ದು, 9 ಜನರು ಕಾಣೆಯಾಗಿದ್ದಾರೆ. ಈ ಘಟನೆ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದೆ.

ಲಾಚೆನ್ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ನಂತರ ಚಾಟೆನ್‌ನಲ್ಲಿರುವ ಸೇನಾ ಶಿಬಿರದಲ್ಲಿ ಭೂಕುಸಿತ ಸಂಭವಿಸಿದೆ. ಸೇನಾ ಸಿಬ್ಬಂದಿಯ ಮೂವರು ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು, 9 ಮಂದಿ ಕಾಣೆಯಾಗಿದ್ದಾರೆ. ಸೇನೆಯಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಉತ್ತರ ಸಿಕ್ಕಿಂನ ಅನೇಕ ಪ್ರದೇಶಗಳು ಹಲವಾರು ಭೂಕುಸಿತಗಳಿಂದಾಗಿ ಸಂಪರ್ಕ ಕಡಿತಗೊಂಡಿರುವುದರಿಂದ ಜೀವಹಾನಿಯ ವರದಿಗಳು ನಿಯಮಿತವಾಗಿ ಬರುತ್ತಿವೆ. ಉತ್ತರ ಸಿಕ್ಕಿಂನ ಲಾಚೆನ್‌ನಂತಹ ಸ್ಥಳಗಳು ಎಲ್ಲಾ ಕಡೆಯಿಂದಲೂ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿವೆ. ಆದರೆ ಲಾಚುಂಗ್‌ನಲ್ಲಿ ಸಿಲುಕಿರುವ ಕೆಲವು ಪ್ರವಾಸಿಗರನ್ನು ಇಂದು ಬೆಳಿಗ್ಗೆಯಿಂದ ಸ್ಥಳಾಂತರಿಸಲಾಗಿದೆ

Ads on article

Advertise in articles 1

advertising articles 2

Advertise under the article