ಚಾಮರಾಜನಗರ :ಬಿಸಿಯೂಟಕ್ಕೆ ದಲಿತ ಮಹಿಳೆ ನೇಮಿಸಿದ್ದಕ್ಕೆ ಸ್ಕೂಲನ್ನೇ ಬಿಟ್ಟ 21 ಮಕ್ಕಳು, ಒಬ್ಬನೇ ಬಾಕಿ;ಚಾ.ನಗರ ಶಾಲೆಯಲ್ಲಿ ಆಘಾತಕಾರಿ ಘಟನೆ..!!
Tuesday, June 24, 2025
ಇತ್ತೀಚೆಗೆ ಬಿಸಿಯೂಟದ ಅಡುಗೆಗಾಗಿ ದಲಿತ ಮಹಿಳೆ ನೇಮಕ
ಹೀಗಾಗಿ ಟೀಸಿ ಪಡೆದ 12 ಮಕ್ಕಳು, ಟೀಸಿಗೆ 9 ಮಕ್ಕಳ ಅರ್ಜಿ ಸಲ್ಲಿಕೆ
ಸದ್ಯ ಪಾಠ ಪ್ರವಚನಕ್ಕೆ ಕೇವಲ ಒಬ್ಬನೇ ವಿದ್ಯಾರ್ಥಿ ಆಗಮನ.
ಸರ್ಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ದಲಿತ ಮಹಿಳೆಯನ್ನು ನೇಮಕ ಮಾಡಿದರು ಎಂಬ ಒಂದೇ ಕಾರಣಕ್ಕೆ ಪೋಷಕರು ತಮ್ಮ 21 ಮಕ್ಕಳನ್ನು ಶಾಲೆ ತೊರೆಸಿದ ಆಘಾತಕಾರಿ ಘಟನೆ ಚಾಮರಾಜನಗರ ಜಿಲ್ಲೆಯ ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಬಾಕಿ ಉಳಿದಿದ್ದಾನೆ. ಚಾಮರಾಜಗರ ತಾಲೂಕಿನಲ್ಲೇ ಬರುವ ಹೊಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನಲ್ಲಿ 22 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು.