ಕಾರವಾರ :ಭಟ್ಕಳದಲ್ಲಿ ಎರಡು ಪ್ರತ್ಯೇಕ ಘಟನೆ; ಕಾಲುವೆಗೆ ಬಿದ್ದು 2 ವರ್ಷದ ಮಗು, ನೀರಿನಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ಸಾವು.
Sunday, June 15, 2025
ಕಾರವಾರ (ಉತ್ತರ ಕನ್ನಡ): ಎರಡು ವರ್ಷದ ಮಗು ಮತ್ತು 50 ವರ್ಷದ ವ್ಯಕ್ತಿ ನೀರುಪಾಲಾಗಿರುವ ಎರಡು ಪ್ರತ್ಯೇಕ ಘಟನೆ ಭಟ್ಕಳ ತಾಲೂಕಿನಲ್ಲಿ ನಡೆದಿದೆ.
ಭಟ್ಕಳದ ಜಾಲಿ ಪಟ್ಟಣದ ವ್ಯಾಪ್ತಿಯಲ್ಲಿ ಎರಡು ವರ್ಷದ ಮಗು ಮನೆಯ ಎದುರಿಗಿದ್ದ ಕಾಲುವೆಗೆ ಬಿದ್ದು ಸಾವನ್ನಪ್ಪಿದೆ. ಮಗು ಕಾಲುವೆಗೆ ಬೀಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನೀರಿನಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ಸಾವು: ಭಟ್ಕಳ ತಾಲೂಕಿನ ಗುಳ್ಮೆ ಬೆಳಲಖಂಡ ಎಂಬಲ್ಲಿ ಮಾದೇವ ನಾರಾಯಣ ದೇವಾಡಿಗ (50) ಎಂಬುವರು ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.