ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬವನ್ನು ವಿಮಾನದಲ್ಲಿಯೇ ಆಚರಿಸಿ ಶುಭ ಕೋರಿದ ಏರ್ ಇಂಡಿಯಾ ಸಿಬ್ಬಂದಿ..!!

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬವನ್ನು ವಿಮಾನದಲ್ಲಿಯೇ ಆಚರಿಸಿ ಶುಭ ಕೋರಿದ ಏರ್ ಇಂಡಿಯಾ ಸಿಬ್ಬಂದಿ..!!

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರ ಹುಟ್ಟುಹಬ್ಬವನ್ನು ಒಂದು ದಿನದ ಮುನ್ನವೇ ಏ‌ರ್ ಇಂಡಿಯಾ ಸಿಬ್ಬಂದಿ ವಿಮಾನದಲ್ಲಿಯೇ ವಿಶೇಷವಾಗಿ ಆಚರಿಸಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ 35 ಸಾವಿರ ಅಡಿ ಎತ್ತರದಲ್ಲಿಯೇ ಕೇಕ್ ಕತ್ತರಿಸಿ ಏರ್ ಇಂಡಿಯಾ ಪರವಾಗಿ ಸಿಬ್ಬಂದಿ ಜನ್ಮದಿನದ ಶುಭ ಕೋರಿದ್ದಾರೆ.

ನಾಳೆ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ : ಹೆಚ್. ಡಿ. ದೇವೇಗೌಡರ 93ನೇ ಹುಟ್ಟುಹಬ್ಬದ ನಿಮಿತ್ತ ಬೆಂಗಳೂರು ಮಹಾನಗರ ಜನತಾದಳ, ಜೆಡಿಎಸ್ ಹಾಗೂ ಮಹಿಳಾ ವಿಭಾಗದಿಂದ ನಾಳೆ ಬೆಳಗ್ಗೆ ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ದೇವೇಗೌಡರ ಹೆಸರಿನಲ್ಲಿ ಪೂಜೆ ಸಲ್ಲಿಸಿ, ಮೃತ್ಯುಂಜಯ ಹೋಮ ನಡೆಸಲಾಗುತ್ತದೆ.


ಈ ಪೂಜಾ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಜೆಡಿಎಸ್ ತಿಳಿಸಿದೆ.

ಹುಟ್ಟುಹಬ್ಬದ ಪ್ರಯುಕ್ತ ದೇವೇಗೌಡರು ಹಾಗೂ ಕುಟುಂಬದವರು ನಾಳೆ ಬೆಳಗಿನ ಜಾವ ತಿರುಮಲದ ವೆಂಕಟೇಶ್ವರಸ್ವಾಮಿ ದರ್ಶನ ಪಡೆಯಲಿದ್ದಾರೆ.

ಇಂದು ಸಂಜೆ ಹೆಚ್​ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಗೌಡರು ತಿರುಪತಿಗೆ ಪ್ರಯಾಣ ಮಾಡಲಿದ್ದಾರೆ. ಅವರ ಜೊತೆ ಪತ್ನಿ ಚನ್ನಮ್ಮ ದೇವೇಗೌಡರು ಸೇರಿದಂತೆ ಅವರ ಕುಟುಂಬದ 20ಕ್ಕೂ ಹೆಚ್ಚು ಸದಸ್ಯರು ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ರಾತ್ರಿ ತಿರುಮಲದಲ್ಲಿ ವಾಸ್ತವ್ಯ ಹೂಡಲಿರುವ ಗೌಡರು ಮತ್ತು ಕುಟುಂಬದವರು ಮುಂಜಾನೆ ವೆಂಕಟೇಶ್ವರಸ್ವಾಮಿ ದರ್ಶನ ಪಡೆಯಲಿದ್ದಾರೆ. ನಂತರ ಅತಿಥಿಗೃಹವೊಂದನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ

Ads on article

Advertise in articles 1

advertising articles 2

Advertise under the article