ಮಂಗಳೂರು :ಸುಹಾಸ್ ಶೆಟ್ಟಿ ಹತ್ಯೆ ; ಕೊಲೆಗೆ ಫಾಜಿಲ್ ಸಹೋದರನಿಂದ ಸುಪಾರಿ ಪಡೆದಿದ್ದ ಹಂತಕರು.

ದಕ್ಷಿಣಕನ್ನಡ : ಮಂಗಳೂರಿನ ರೌಡಿಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಫಾಜಿಲ್ ಸಹೋದರನಿಂದಲೂ ಕೊಲೆಗೆ ಸುಪಾರಿ ನೀಡಲಾಗಿತ್ತು ಎನ್ನಲಾಗಿದೆ. ಸಫ್ವಾನ್ ವೈಯಕ್ತಿಕ ದ್ವೇಷ ಇಟ್ಟುಕೊಂಡಿದ್ದರೆ, ಇನ್ನು ಫಾಜಿಲ್ ಸಹೋದರ ಅಣ್ಣನ ಕೊಲೆಗೆ ಪ್ರತೀಕಾರಕ್ಕಾಗಿ ಇಬ್ಬರು ಸೇರಿ ಸುಹಾಸ್ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾವಾಲ್ ಅವರು ಹೇಳಿದ್ದಾರೆ.ಸಫ್ವಾನ್ ಪ್ರಮುಖ ಆರೋಪಿ. 2023ರಲ್ಲಿ ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಸಫ್ವಾನ್ಗೆ ಸುಹಾಸ್ ಶೆಟ್ಟಿ ಕೊಲೆ ಮಾಡುವ ಆತಂಕ ಇತ್ತು. ಹಾಗಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು. ಅದಕ್ಕಾಗಿ ಫಾಜಿಲ್ ತಮ್ಮ ಆದಿಲ್ ಮೆಹರೂಫ್ ನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನಿಸಿದ್ದರು ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ 8 ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಇಬ್ಬರು ಹಿಂದುಗಳು ಇರುವುದು ದೃಢಪಟ್ಟಿದೆ. ಈ ಹಿಂದೆ ಕೊಲೆಯಾಗಿದ್ದ ಫಾಜಿಲ್ ತಮ್ಮ ಆದಿಲ್ ಸುಹಾಸ್ ಕೊಲೆಗೆ ಸಂಚು ಹೂಡಿದ್ದು, 5 ಲಕ್ಷ ಫಂಡಿಂಗ್ ಮಾಡಿದ್ದಾಗಿಯೂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಇದರೊಂದಿಗೆ, ಅಣ್ಣನ ಹತ್ಯೆ ಪ್ರತೀಕಾರಕ್ಕೆ ಆದಿಲ್ ಹಿಂದೂಗಳನ್ನೂ ಬಳಸಿಕೊಂಡಿರುವುದು ಬಯಲಾದಂತಾಗಿದೆ.